Mahakumbh Viral Girl Monalisa: ಮಹಾಕುಂಭದ ಸುಂದರಿ ಮೊನಾಲಿಸಾ ಎಷ್ಟು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ? ಅವರ ತಿಂಗಳ ಆದಾಯವೆಷ್ಟು?

Mahakumbh Viral Girl Monalisa: ಸಾಮಾಜಿಕ ಮಾಧ್ಯಮದ ಮೂಲಕ ಖ್ಯಾತಿ ಪಡೆದ ಅದೃಷ್ಟವಂತ ವ್ಯಕ್ತಿಗಳಲ್ಲಿ ಮೊನಾಲಿಸಾ ಎಂಬಾಕೆ ಕೂಡಾ ಒಬ್ಬರು. ಮೊನಾಲಿಸಾಳ ಕಂದು ಕಣ್ಣುಗಳು ಮತ್ತು ಮುಗ್ಧ ನಗು ರಾತ್ರೋರಾತ್ರಿ ಆಕೆಯನ್ನು ಇಂಟರ್ನೆಟ್ ಸೆನ್ಸೇಷನ್ ಆಗಿ ಮಾಡಿತು. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ನಿವಾಸಿಯಾದ ಮೊನಾಲಿಸಾ, ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುತ್ತಿದ್ದು, ವಿಡಿಯೋ ವೈರಲ್ ಮೂಲಕ ಖ್ಯಾತಿ ಪಡೆದಿದ್ದು, ಆದರೆ ಪ್ರಶ್ನೆ ಏನೆಂದರೆ, ಮೊನಾಲಿಸಾ ಎಷ್ಟು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರ ಖಾತೆಗಳು ಯಾವ ಹೆಸರಿನಲ್ಲಿವೆ?

ಮೊನಾಲಿಸಾ ಭೋಂಸ್ಲೆ ಮುಖ್ಯವಾಗಿ ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯರಾಗಿದ್ದಾರೆ, ಅವರ ಅಧಿಕೃತ ಖಾತೆಯನ್ನು @monalisa_bhosle_official ಎಂದು ಹೆಸರಿಸಲಾಗಿದೆ. ಈ ಖಾತೆಯಲ್ಲಿ ಅವರು ಏಳು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರು ನಿಯಮಿತವಾಗಿ ರೀಲ್ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಮೊನಾಲಿಸಾ ಯೂಟ್ಯೂಬ್ನಲ್ಲಿಯೂ ಸಕ್ರಿಯರಾಗಿದ್ದಾರೆ. ಅವರು ಯೂಟ್ಯೂಬ್ನಲ್ಲಿ ಮೊನಾಲಿಸಾ ಭೋಸ್ಲೆ 08 ಎಂಬ ಪುಟವನ್ನು ಹೊಂದಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ಮೂರುವರೆ ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಸಿಲ್ವರ್ ಬಟನ್ ಅನ್ನು ಸಹ ಪಡೆದಿದ್ದಾರೆ. ಟ್ವಿಟರ್ (X) ನಲ್ಲಿ ಮೊನಾಲಿಸಾ ಅವರ ಅಧಿಕೃತ ಖಾತೆ @MonalisaIndb ಹೆಸರಿನಲ್ಲಿದೆ. ಈ ಖಾತೆಯಿಂದ, ಅವರು ಜನವರಿ 2025 ರಲ್ಲಿ ಹಲವಾರು ಪೋಸ್ಟ್ಗಳನ್ನು ಮಾಡಿದ್ದು, ಅದರಲ್ಲಿ ಆಕೆ Instagram ಖಾತೆಯ ಹ್ಯಾಕಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಅವರ ಜನಪ್ರಿಯತೆ ಹೆಚ್ಚಾಯಿತು. ಅದರ ನಂತರ ಆಕೆಗೆ ಯೂಟ್ಯೂಬರ್ಗಳು ಮತ್ತು ಅಭಿಮಾನಿಗಳ ಉಪಟಳ ಹೆಚ್ಚಾಗಿ ನಂತರ, ಆಕೆಯ ಕುಟುಂಬದವರು, ಮಹಾ ಕುಂಭವನ್ನು ತೊರೆದು ಮನೆಗೆ ಮರಳುವಂತೆ ಮಾಡಿದರು.
ಮೊನಾಲಿಸಾ ಸಂಪಾದನೆ ಎಷ್ಟು?
ಇತ್ತೀಚೆಗೆ, ಮೊನಾಲಿಸಾ ಅವರ ಮೊದಲ ಸಂಗೀತ ವೀಡಿಯೊ ಬಿಡುಗಡೆಯಾಗಿದ್ದು, ಇದರಲ್ಲಿ ನಟ ಉತ್ಕರ್ಷ್ ಸಿಂಗ್ ಜೊತೆ ಕಾಣಿಸಿಕೊಂಡಿದ್ದಳು. ಈಗ ಅವರು ದೊಡ್ಡ ಆಭರಣ ಬ್ರಾಂಡ್ನ ರಾಯಭಾರಿಯಾಗಿದ್ದಾರೆ ಮತ್ತು ಇದಕ್ಕಾಗಿ ಅವರಿಗೆ 15 ಲಕ್ಷ ರೂ.ಗಳು ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
Comments are closed.