

Odisha: ರೀಲ್ಸ್ ಮಾಡಲೆಂದು ಹೋದ ಯೂಟ್ಯೂಬರ್ ಓರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೀಲ್ಸ್ ಮಾಡುವಾಗ ಕೊಚ್ಚಿ ಹೋದ ಯುವಕನ ಹೆಸರು ಸಾಗರ್ ಎಂದಾಗಿದ್ದು ಈತನಿಗೆ 22 ವರ್ಷ ಆಗಿತ್ತು. ಸಾಗರ್ ಡ್ರೋನ್ ಕ್ಯಾಮೆರಾ ಬಳಸಿ ಜಲಪಾತದಲ್ಲಿ ರೀಲ್ಸ್ ಮಾಡುವಾಗ ಈ ದುರ್ಘಟನೆ ನಡೆದಿದೆ.
ಯೂಟ್ಯೂಬ್ ಚಾನೆಲ್‌ಗೆಂದು ವಿವಿಧ ಪ್ರವಾಸಿ ಸ್ಥಳಗಳ ವೀಡಿಯೋ ರೆಕಾರ್ಡ್ ಮಾಡಲು ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಜೊತೆ ಕೊರಾಪುಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಹಠಾತ್ ನೀರಿನ ಹರಿವಿನಿಂದ ಸಾಗರ್ ಬಂಡೆ ಮೇಲಿನಿಂದ ನಿಯಂತ್ರಣ ತಪ್ಪಿ ನೀರಿನ ಜೊತೆ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.
ಕೆಲವು ಪ್ರವಾಸಿಗರು ಹಾಗೂ ಸ್ಥಳೀಯರು ಸಾಗರ್‌ನ ರಕ್ಷಣೆಗೆ ಪ್ರಯತ್ನ ಪಟ್ಟಿದ್ದು, ಆದರೆ ಸಾಧ್ಯವಾಗಿಲ್ಲ. ಮಚ್ಕುಂಡ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸಿದ್ದು ಇನ್ನೂ ಕೂಡಾ ಪತ್ತೆ ಕಾರ್ಯ ಆಗಿಲ್ಲ ಎನ್ನಲಾಗಿದೆ.













