Udupi: ಸಾಹಿತಿ ಬಾನು ಮುಷ್ತಾಕ್‌ ಕುರಿತು ಫೇಸ್ಬುಕ್‌ನಲ್ಲಿ ದಸರಾಗೆ ಆಹ್ವಾನ ಖಂಡಿಸಿ ಪೋಸ್ಟ್‌: ಕೇಸು ದಾಖಲು

Share the Article

Udupi: ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದನ್ನು ಖಂಡನೆ ಮಾಡಿ ಜಾಲತಣದಲ್ಲಿ ಪೋಸ್ಟ್‌ ಮಾಡಿದ್ದ ನಿಟ್ಟೆ ಸುದೀಪ್‌ ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ಧರ್ಮಗಳ ಮಧ್ಯೆ ವೈಷಮ್ಯ ಮೂಡಿಸುವಂತೆ ಫೇಸ್ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಆರೋಪದಲ್ಲಿ ಈ ಪ್ರಕರಣ ದಾಖಲು ಮಾಡಲಾಗಿದೆ.

ದಸರಾ ಹಿಂದೂಗಳ ಸಾಂಸ್ಕೃತಿಕ ಹಬ್ಬ, ಸನಾತನ ಹಿಂದೂ ಸಂಸ್ಕೃತಿ ಒಪ್ಪದ ಮತ್ತು ಆಚರಣೆ ಮಾಡದವರಿಂದ ದಸರಾ ಉದ್ಘಾಟನೆ ಮಾಡುವ ದರ್ದು ಏನಿದೆ? ಹಿಂದೂಗಳ ಭಾವನೆಗೆ ಪ್ರತಿ ವಿಚಾರದಲ್ಲಿಯೂ ಕಾಂಗ್ರೆಸ್‌ ಧಕ್ಕೆ ತರುತ್ತದೆ ಎಂದು ನಿಟ್ಟೆ ಸುದೀಪ್‌ ಶೆಟ್ಟಿ ಪೋಸ್ಟ್‌ ಮಾಡಿದ್ದು, ಇದೀಗ ಅವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.