DKS-Rajanna: RSS ಗೀತೆ ಹಾಡಿದ ಡಿಕೆ ಶಿವಕುಮಾರ್‌ಗೆ ಕೆಎನ್‌ ರಾಜಣ್ಣ ಮಾತಿನ ಚಾಟಿ

Share the Article

DCM DK Shivakumar: ಸದನದಲ್ಲಿ ನಿಂತು ಡಿಕೆ ಶಿವಕುಮಾರ್‌ ಅವರು ಆರ್‌ಎಸ್‌ಎಎಸ್‌ ಗೀತೆಯ ಗುಣಗಾನ ಮಾಡಿದ್ದು ಇದಕ್ಕೆ ಡಿಕೆಶಿ ಪರ-ವಿರುದ್ಧದ ಹೇಳಿಕೆಗಳು ಬರುತ್ತಿದೆ. ಇದರ ನಡುವೆ ಸಂಪುಟದಿಂದ ವಜಾಗೊಂಡಿರುವ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ (K N Rajanna) ಅವರು ಡಿಕೆ ಶಿವಕುಮಾರ್‌ಗೆ ಟಾಂಗ್‌ ನೀಡಿದ್ದಾರೆ.

ಅವರು ಏನು ಬೇಕಾದರೂ ಮಾಡಬಹುದು ಕಣ್ರಿ. ಅವರು ಆರ್‌ಎಸ್‌ಎಸ್‌ ಗೀತೆನಾದರೂ ಹಾಡಬಹುದು. ಅಮಿತ್‌ ಶಾ ಜೊತೆ ಹೋಗಿ ಸದ್ಗುರು ಡಯಾಜ್‌ನಲ್ಲೂ ಕುಳಿತುಕೊಳ್ಳಬಹುದು ಎಂದು ತುಮಕೂರಿನಲ್ಲಿ ರಾಜಣ್ಣ ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಹೋಗಿ ಅಲ್ಲಿ ಪುಣ್ಯ ಸ್ನಾನ ಮಾಡಿದರೆ ಬಡವರ ಹೊಟ್ಟೆ ತುಂಬುತ್ತಾ ಹೇಳಿ ನಂತರ ಅಲ್ಲಿಗೆ ಹೋಗಿ ಸ್ನಾನ ಮಾಡುತ್ತಾರೆ. ಇವೆಲ್ಲಾ ಜನರೇ ತೀರ್ಮಾ ಮಾಡುತ್ತಾರೆ ಎಂದು ಡಿಕೆಶಿ ನಡೆ ಕುರಿತು ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿ ಈ ಮಾತನ್ನು ಹೇಳಿದ್ದಾರೆ.

Comments are closed.