Accident: ಕಾಪು: ಖ್ಯಾತ ಡಿಜೆ, ನಿರೂಪಕ ಮರ್ವಿನ್ ಅಪಘಾತದಲ್ಲಿ ಮೃತ್ಯು!!

Share the Article

Accident : ನಾಯಿಯನ್ನು ತಪ್ಪಿಸಲು ಹೋಗಿ ಬೆಲ್ಮಣ್ ನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಮೂಳೂರಿನ ಹಳ್ಳಿಮನೆ ಹೋಟೆಲಿನ ಮುಂಭಾಗದಲ್ಲಿ ಇಂದು (ಆ.23) ಶನಿವಾರ ಮುಂಜಾನೆ ನಡೆದಿದೆ.

ಗಂಭೀರ ಗಾಯಗೊಂಡ ಖ್ಯಾತ ಡಿಜೆ ಮತ್ತು ನಿರೂಪಕ ಮರ್ವಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಬೆಲ್ಮಣ್ ನ ಪ್ರಜ್ವಲ್, ಕಾರ್ಕಳದ ಪ್ರಸಾದ್, ವಿಶ್ಲೇಷ್ ಗಾಯಗೊಂಡಿದ್ದಾರೆ. ಮೃತ ಮರ್ವಿನ್ ಖ್ಯಾತ ಕಾರ್ಯಕ್ರಮ ನಿರೂಪಕನಾಗಿದ್ದು, ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Bengaluru: ವೀಲಿಂಗ್ ಮಾಡಿ ತೊಂದರೆ ಮಾಡುವ ಪುಂಡರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್!

Comments are closed.