Bhopal: ಡ್ರಗ್‌ ಮಾರಿ ಐಷರಾಮಿ ಜೀವನ ನಡೆಸುತ್ತಿದ್ದ ಡ್ರಗ್‌ ಪೆಡ್ಲರ್‌ ಮನೆ ಬುಲ್ಡೋಜರ್‌ನಿಂದ ಧ್ವಂಸ

Share the Article

Bhopal: ಡ್ರಗ್‌ ಮಾರಾಟ ದಂಧೆಯಿಂದಲೇ ಕುಖ್ಯಾತಿ ಗಳಿಸಿದ್ದಲ್ಲದೇ ಮೂರಂತಸ್ಥಿನ ಐಷಾರಾಮಿ ಮನೆ ಕಟ್ಟಿಸಿದ್ದು, ಇದನ್ನು ಬುಲ್ಡೋಜರ್‌ ಮೂಲಕ ಧ್ವಂಸ ಮಾಡಲಾಗಿದೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಈ ಮನೆ 1990 ರಲ್ಲಿ ನಿರ್ಮಿಸಲಾಗಿದ್ದು, ಮೂರಂತಸ್ಥಿನ ಈ ಐಷರಾಮಿ ಮನೆಯಲ್ಲಿ ಗ್ಯಾರೇಜ್‌, ಪಾರ್ಕ್‌, 30 ಕೊಠಡಿಗಳು, ಫ್ಯಾಕ್ಟರಿ ಕೂಡಾ ಇತ್ತು. ಈ ಡ್ರಗ್‌ ಪೆಡ್ಲರ್‌, ಯಾಸಿನ್‌ ಮಚ್ಲಿ ವಿರುದ್ಧ ಮಾದಕವಸ್ತು ಕಳ್ಳಸಾಗಾಣೆ, ಲೈಂಗಿಕ ಶೋಷಣೆ, ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡುವ ಮೂಲಕ ಹುಡುಗಿಯರನ್ನು ಬ್ಲ್ಯಾಕ್‌ಮೇಲ್‌ ಮಾಡುವುದು, ಮಾದಕ ವ್ಯಸನಕ್ಕೆ ಒತ್ತಾಯಿಸುವುದು, ಹೈಪ್ರೊಫೈಲ್‌ ಮಾದಕವಸ್ತು ಪಾರ್ಟಿ ಆಯೋಜನೆ ಮಾಡುವುದು, ಅಪಹರಣ, ಹಲ್ಲೆ ಮತ್ತು ಲೂಟಿ ಆರೋಪವಿದೆ.

ಈತನ ಕುಟುಂಬದ ಇನ್ನೋರ್ವ ಸದಸ್ಯ ಶಹ್ವಾರ್‌ ಮಚ್ಲಿ ವಿರುದ್ಧ ಕೂಡಾ ಮಾದಕವಸ್ತು ಕಳ್ಳಸಾಗಣೆ, ಅಶ್ಲೀಲ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲೆ ಮಾಡಿದ ಆರೋಪವಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣವಿದೆ.

Technology: ಐಕಾನಿಕ್ ‘ಯೆಜ್ಡಿ ರೋಡ್‌ಸ್ಟರ್‌’ ಬೈಕ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ!

Comments are closed.