Tik Tok: ಭಾರತಕ್ಕೆ ಮತ್ತೆ Tik Tok ರೀ ಎಂಟ್ರಿ? ರೀಲ್ಸ್ ಪ್ರಿಯರಿಗೆ ಸಿಗುತ್ತಾ ಗುಡ್ ನ್ಯೂಸ್?

Share the Article

Tik Tok: ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಟಿಕ್‌ ಟಾಕ್‌ (TikTok) ಸುಮಾರು 5 ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿತ್ತು. ಇದೀಗ ಈ ಟಿಕ್ ಟಾಕ್ ಮತ್ತೇ ಭಾರತಕ್ಕೆ ಬರಲಿದೆಯೇ ಎನ್ನುವ ಸುದ್ದಿ ಇಂದು ಇಂಟೆರ್ನೆಟ್ ದುನಿಯಾದಲ್ಲಿ ವೇಗವಾಗಿ ಹರಿದಾಡುತ್ತಿದೆ.

ಯಸ್, ಭಾರತದಲ್ಲಿ 5 ವರ್ಷಗಳ ಹಿಂದೆ ಬಂದ್ ಆಗಿದ್ದ ಟಿಕ್‌ ಟಾಕ್‌ ವೆಬ್‌ಸೈಟ್ ಈಗ ತೆರೆಯುತ್ತಿದೆ. ಇದರಿಂದ ಅನೇಕ ಜನರು ಇದರ ಬಗ್ಗೆ ಹೆಚ್ಚು ಕುತೂಹಲ ತೋರಿ ಸರ್ಚ್ ಮಾಡಿ ಹುಡುಕಾಡುತ್ತಿದ್ದರೆ. ಇದಕ್ಕೆ ಉತ್ತರ ನೋಡುವುದಾದರೆ ಪ್ರಸ್ತುತ ಇದರ ಬಗ್ಗೆ ಟಿಕ್‌ಟಾಕ್ ಯಾವುದೇ ಅಧಿಕೃತವಾಗಿ ಮಾಹಿತಿ ನೀಡಲ್ಲ.

ಇನ್ನು ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್ಗಳಲ್ಲಿ ಲಭ್ಯವಿಲ್ಲ ಪ್ರಸ್ತುತ ಕೇವಲ ವೆಬ್‌ಸೈಟ್ ಪೇಜ್ ಮಾತ್ರ ತೆರೆಯುತ್ತಿರುವುದು ಜನರಲ್ಲಿ ಕುತೂಹಲ ಕೆರಳಿಸಿದೆ. ಆದರೆ ಭಾರತಕ್ಕೆ ಈ ಅಪ್ಲಿಕೇಶನ್ ಪ್ರಸ್ತುತ ಹಿಂತಿರುಗುತ್ತಿಲ್ಲ ಯಾಕೆಂದರೆ ರಾಷ್ಟ್ರೀಯ ಭದ್ರತೆ ಮತ್ತು ಡೇಟಾ ಗೌಪ್ಯತೆಯ ಕಾಳಜಿಯಿಂದಾಗಿ (Section 69A of the Information Technology Act, 2000) ಇದನ್ನು ನಿಷೇಧಿಸಲಾಗಿದೆ.

ವೆಬ್‌ನಲ್ಲಿ ಕೆಲವು ಬಳಕೆದಾರರಿಗೆ ಇತ್ತೀಚಿನ ಪ್ರವೇಶವು ಮರಳುವಿಕೆಯ ವದಂತಿಗಳನ್ನು ಹುಟ್ಟುಹಾಕಿದ್ದರೂ ಸಹ ಬೈಟ್‌ಡ್ಯಾನ್ಸ್ (ByteDance) ಚೀನೀ ಒಡೆತನದ ಈ ಅಪ್ಲಿಕೇಶನ್ 29ನೇ ಜೂನ್ 2020 ರಲ್ಲಿ ನಿಷೇಧಿಸಲಾಗಿತ್ತು ಆದರೆ ಇತ್ತೀಚೆಗೆ ವೆಬ್‌ಸೈಟ್ ಪ್ರವೇಶ ನಿಡುತ್ತಿರುವುದು ಜನರ ತಲೆಗೆ ಹುಳ ಬಿಟ್ಟಂತಾಗಿದೆ.

Comments are closed.