Dharmasthala Temple: ಧರ್ಮಸ್ಥಳ ಹುಂಡಿ ಹಣದ ಲೆಕ್ಕ ಕೇಳಿರುವ ಬಗ್ಗೆ ನನಗೆ ಗೊತ್ತಿಲ್ಲ: ಅದು ಮುಜರಾಯಿ ಇಲಾಖೆಗೆ ಬರೋದಿಲ್ಲ – ರಾಮಲಿಂಗಾ ರೆಡ್ಡಿ

Dharmasthala Temple: ಧರ್ಮಸ್ಥಳ ಹುಂಡಿ ಹಣದ ಲೆಕ್ಕದ ಬಗ್ಗೆ ಮಾಹಿತಿ ಬೇಕೆಂದು ನಿನ್ನೆ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಲಾಗಿತ್ತು. ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಈ ಬಗ್ಗೆ ನನಗೆ ಏನು ಗೊತ್ತಿಲ್ಲ. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದು ಉತ್ತರಿಸಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 35565 ದೇವಸ್ಥಾನಗಳಿವೆ. ಈ ದೇವಾಲಯದಲ್ಲಿ ಏನಾದ್ರು ಆದ್ರೆ ಮುಜರಾಯಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುತ್ತೆ. 1 ಲಕ್ಷ 50 ಸಾವಿರ ಖಾಸಗಿ ದೇವಸ್ಥಾನಗಳಿವೆ ಅದರಲ್ಲಿ ಧರ್ಮಸ್ಥಳ ಕೂಡ ಒಂದು. ನಮ್ಮ ವ್ಯಾಪ್ತಿಗೆ ಧರ್ಮಸ್ಥಳ ದೇವಾಲಯ ಬರೋದಿಲ್ಲ, ಹೀಗಾಗಿ ನಮಗೆ ಮಾಹಿತಿ ಇಲ್ಲ. ನಮ್ಮ ಗಮನಕ್ಕೆ ಯಾರೂ ಇದುವರೆಗೂ ತಂದಿಲ್ಲ ಎಂದರು.
ನಮ್ಮ ಮುಜರಾಯಿ ದೇವಾಸ್ಥಾನಗಳನ್ನು ನೋಡಿಕೊಳ್ಳೋದೆ ಕಷ್ಟ ಆಗ್ತಿದೆ. ಹೀಗಾಗಿ ಧರ್ಮಸ್ಥಳ ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಿಕೊಳ್ಳುವ ವಿಚಾರ ಇಲ್ಲ. ಇದುವರೆಗೂ ಧರ್ಮಸ್ಥಳ ದೇವಾಸ್ಥಾನವನ್ನು ಮುಜರಾಯಿ ಸೇರ್ಪಡೆ ಬಗ್ಗೆ ಚರ್ಚೆ ಇಲ್ಲ. ಆದ್ರೆ ಕಳೆದ ಹಲವು ದಿನಗಳಿಂದ ಧರ್ಮಸ್ಥಳ ವಿಚಾರ ಚರ್ಚೆಯನ್ನು ಮಾಧ್ಯಮದಲ್ಲಿ ನೋಡ್ತಿದ್ದೇನೆ ಎಂದಷ್ಟೇ ಪ್ರತಿಕ್ರಿಯೇ ನೀಡಿದ್ದಾರೆ.
Resigns: ನಟಿಗೆ ಲೈಂಗಿಕ ದೌರ್ಜನ್ಯ ಆರೋಪ; ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ!
Comments are closed.