Death: ರೀಲ್ಸ್ ಗೆ ಬಲಿಯಾದ ಮತ್ತೊಬ್ಬ ವಿದ್ಯಾರ್ಥಿ!

Death: ಗೆಳೆಯರ ಜತೆಗೆ ರೀಲ್ಸ್ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಅರಕಲಗೂಡು ತಾಲೂಕು ಕಬ್ಬಳಿಗೆರೆ ಗ್ರಾಮದ ಬಳಿ ನಡೆದಿದೆ.

ಮೃತ ಕಿರಣ್ (19) ದ್ವಿತೀಯ ಪಿ.ಯು. ವಿದ್ಯಾರ್ಥಿ. ಬುಧವಾರ ಆತ ಸ್ನೇಹಿತ ರೊಂದಿಗೆ ಟ್ರ್ಯಾಕ್ಟರನ್ನು ವೇಗವಾಗಿ ಚಲಾಯಿಸುತ್ತ, “ಕೆಂಚಾಲೋ, ಮಂಚಾಲೋ…’ ಹಾಡಿಗೆ ರೀಲ್ಸ್ ಮಾಡುತ್ತಿದ್ದ. ಟ್ರ್ಯಾಕ್ಟರ್ ರಸ್ತೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಿರಣ್ ಅದರಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Comments are closed.