Dharmasthala: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ, ಯೂಟ್ಯೂಬರ್ ಸಮೀರ್ ವಿರುದ್ಧ ಡಿಜಿ-ಐಜಿಪಿಗೆ ದೂರು!

Share the Article

Dharmasthala : ಧರ್ಮಸ್ಥಳದ (Dharmasthala) ವಿರುದ್ಧವಾಗಿ ಸಾಮಾಜಿಕ ಜಾಲಾತಾಣದಲ್ಲಿ (Social Media) ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಹೋರಾಟಗಾರ ತೇಜಸ್ ಗೌಡ ಅವರು ಯೂಟ್ಯೂಬರ್ ಸಮೀರ್ (Youtuber Sameer) ವಿರುದ್ಧ ಡಿಜಿ-ಐಜಿಪಿಗೆ ದೂರು ಸಲ್ಲಿಸಿದ್ದಾರೆ.

ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಸುಖಾಸುಮ್ಮನೆ‌ ಅಪಪ್ರಚಾರ ಮಾಡುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವ ವಿಷಯಗಳಿರುವ ವೀಡಿಯೋ ಮಾಡುತ್ತಿರುವುದಕ್ಕೆ ವಿದೇಶಗಳಿಂದ ಅಕ್ರಮ ಹಣ ಸಂದಾಯವಾಗುತ್ತಿರುವುದರ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ರಮವಾಗಿ ಹಣ ಸಂದಾಯವಾಗ್ತಿದೆ

ಇನ್ನು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಮೀರ್‌ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತೇಜಸ್‌ ಆಗ್ರಹ ಮಾಡಿದ್ದು, ಈ‌ ರೀತಿ ಕಷೇತ್ರದ ಬಗ್ಗೆ ಅಪಪ್ರಚಾರ ಮಾಡುವ ವಿಡಿಯೋಗಳನ್ನ ಮಾಡಿ ಹಾಕುವುದಕ್ಕೆ ಅಕ್ರಮ ಹಣ ಬರುತ್ತಿರುವ ಬಗ್ಗೆ ಅನುಮಾನ ಮೂಡಿದೆ. ಅಲ್ಲದೇ, ಈ ಬಗ್ಗೆ ವಿಡಿಯೋ ಮಾಡಲು ಕೆಲವು ಯೂಟ್ಯೂಬರ್ಸ್ ಗಳಿಗೆ ಬೇರೆ ಬೇರೆ ದೇಶದಿಂದ ಹಣ ಬರುತ್ತಿದೆ. ಈ ಬಗ್ಗೆ ಸಹ ತನಿಖೆ ಮಾಡಬೇಕಾಗಿದೆ ಎಂದು ತೇಜಸ್‌ ಮನವಿ ಮಾಡಿದ್ದು, ಬೆಂಗಳೂರಿನ ಇಡಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಇನ್ನು ದೂರು ಸ್ವೀಕರಿಸಿರುವ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಕಾನೂನಿನಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ

ಭಾರತೀಯ ನ್ಯಾಯ ಸಂಹಿತೆ 2023

ಸುಳ್ಳು ಮಾಹಿತಿ ನೀಡುವುದು – ಸೆಕ್ಷನ್ 192

ಧರ್ಮ ಹಾಗೂ ಭಾಷೆಗಳ ನಡುವೆ ದ್ವೇಷ ಬಿತ್ತುವುದು – ಸೆಕ್ಷನ್ 194

ಮೋಸ ಮತ್ತಿ ತಪ್ಪು ವಿಷಯಗಳ ಪ್ರಸಾರ – ಸೆಕ್ಷನ್ 240

ಧಾರ್ಮಿಕ ಭಾವನೆಗಳಿಗೆ ಅವಮಾನ – ಸೆಕ್ಷನ್ 298

ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ – ಸೆಕ್ಷನ್ 353(1/ಬಿ)

ಮಾನಹಾನಿ – ಸೆಕ್ಷನ್ 356

ಅಪರಾಧ ಮಾಡಲು ಷಡ್ಯಂತ್ರ – ಸೆಕ್ಷನ್ 61

ಮೋಸದಿಂದ ಮಾಹಿತಿ ಪ್ರಸಾರ – ಸೆಕ್ಷನ್ 66ಡಿ

ಸಾರ್ವಜನಿಕ ಶಾಂತಿಗೆ ಹಾನಿ ಮಾಡುವ ವಿಷಯ ತಡೆಯುವ ಅಧಿಕಾರ – ಸೆಕ್ಷನ್ 66ಎ

Comments are closed.