DEVIL: ದರ್ಶನ್ ನಟನೆಯ ಡೆವಿಲ್‌ ಸಿನಿಮಾ: ಆ. 24 ರಂದು ಫಸ್ಟ್ ಸಾಂಗ್ ರಿಲೀಸ್

Share the Article

DEVIL: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ಡೆವಿಲ್ (Devil) ಸಿನಿಮಾ ಹೊಸ ಅಪ್ಲೇಟ್ (Update) ಒಂದು ಸಿಕ್ಕಿದೆ.

ಇದೇ ಭಾನುವಾರ ಚಿತ್ರದ ಮೊದಲ ಹಾಡು ರಿಲೀಸ್ ಆಗುತ್ತಿದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ. ಈ ಹಾಡು ನಟ ದರ್ಶನ್ ಮತ್ತೆ ಅರೆಸ್ಟ್ ಆದ ಮರು ದಿನವೇ ರಿಲೀಸ್ ಆಗುವುದಿತ್ತು. ಆದರೆ ದರ್ಶನ್ ಜೈಲು ಪಾಲಾದ ಹಿನ್ನೆಲೆಯಲ್ಲಿ ಅದು ಕ್ಯಾನ್ಸಲ್ ಆಗಿತ್ತು. ಇದೀಗ ಅದೇ ಹಾಡು ಆ. 24 ರಂದು ರಿಲೀಸ್ ಆಗುತ್ತಿದೆ.

ನಟ ದರ್ಶನ್ ಅವರ ಸಾಮಾಜಿಕ ಜಾಲತಾಣ ಎಕ್ಸ್‌ ಪೇಜಿನಲ್ಲಿ ಡೆವಿಲ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಈ ಚಿತ್ರದ ಮೊದಲ ಹಾಡು ಆಗಸ್ಟ್ 24 ರಂದು ಭಾನುವಾರ ಬೆಳಗ್ಗೆ 10.05 ಕ್ಕೆ ರಿಲೀಸ್ ಆಗುತ್ತಿದೆ ಎಂದು ಪೋಸ್ಟರ್ ಸಮೇತ ಶೇರ್ ಮಾಡಲಾಗಿದೆ. ಪೋಸ್ಟರ್‌ನಲ್ಲಿ ‘ಇದ್ರೆ ನೆಮ್ಮಿಯಾಗ್ ಇರ್ಬೆಕು’ ಎಂಬ ಲೈನ್ ಕೂಡ ಇದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.

DOCTORS: ಸರ್ಕಾರಿ ವೈದ್ಯರು, ನರ್ಸ್ಗಳಿಗೆ ಗ್ರಾಮೀಣ ಸೇವೆ ಕಡ್ಡಾಯ: ತಿದ್ದುಪಡಿ ಕಾಯ್ದೆಗೆ ಅನುಮೋದನೆ!

Comments are closed.