Heavy Rain: ಪಾಕ್, ಹಿ.ಪ್ರದೇಶದಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ : ದಿಢೀರ್ ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ, ಅಂಗಡಿಗಳು

Share the Article

Heavy Rain: ಹಿಮಾಚಲಪ್ರದೇಶದ ಕುಲ್ಲು ಜಿಲ್ಲೆಯ ಕನಾನ್ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಉಂಟಾದ ದಿಢೀರ್ ಪ್ರವಾಹದಲ್ಲಿ ಸೇತುವೆ ಹಾಗೂ ಮೂರು ಅಂಗಡಿ ಗಳು ಕೊಚ್ಚಿಹೋಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ ವರದಿಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಕುಲ್ಲು ಮತ್ತು ಬಂಜರ್ ಉಪ ವಿಭಾಗಗಳಲ್ಲಿ ಶಾಲೆಗಳು, ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಶಿಮ್ಲಾದ ರಾಮಚಂದ್ರ ಚೌಕ್ ಬಳಿಕ ಸೋಮವಾರ ತಡರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಟ್ಟಡಗಳಿಗೆ ಹಾನಿಯಾಗಿದೆ. ಛೋಟಾ ಶಿಮ್ಲಾದಲ್ಲೂ ಮರಗಳು ನೆಲಕ್ಕೆ ಉರುಳಿವೆ.

ಕುಲ್ಲು ಮತ್ತು ಬಂಜರ್ ಪ್ರದೇಶಗಳಲ್ಲಿ ಮೇಫ್ ಸ್ಪೋಟ, ದಿಢೀರ್ ಪ್ರವಾಹ ಹಾಗೂ ಭೂಕುಸಿತಗಳು ವರದಿಯಾಗಿವೆ. ಇದರಿಂದಾಗಿ ಹಲವೆಡೆ ಹಾನಿ ಉಂಟಾ ಗಿದ್ದು, ರಸ್ತೆ ಸಂಚಾರಕ್ಕೆ ತೊಡಕಾಗಿವೆ. ಜೂನ್ 20ರಂದು ಮುಂಗಾರು ಪ್ರಾರಂಭವಾದ ನಂತರ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 2,194 ಕೋಟಿಗೂ ಹೆಚ್ಚು |ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಜೂನ್‌ನಿಂದ ಇದುವರೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹ ದಿಂದಾಗಿ ಸಂಭವಿಸಿದ ಅವಘಡ ಗಳಲ್ಲಿ ಸಾವಿಗೀಡಾದವರ ಸಂಖ್ಯೆ ಕನಿಷ್ಠ 700ಕ್ಕೂ ಹೆಚ್ಚಿದ್ದು, ಕನಿಷ್ಠ 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆ.22ರವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ. ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚು ಹಾನಿ ಉಂಟು ಮಾಡಿದ ಮಳೆಗಾಲ.

ಸೆಪ್ಟೆಂಬರ್‌ನಲ್ಲೂ ಮಳೆ ಸುರಿಯಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ 60ರಿಂದ 70ರಷ್ಟು ಹೆಚ್ಚು ಮಳೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪ್ರಾಧಿಕಾರದ ವಕ್ತಾರ ತಯ್ಯಬ್ ಶಾಹ ತಿಳಿಸಿದ್ದಾರೆ. ಜೂನ್ 26ರ ನಂತರ ಮಳೆ ಹಾನಿಯಿಂದ 171 ಮಹಿಳೆಯರು, 94 ಮಕ್ಕಳು ಸೇರಿದಂತೆ 657 ಮಂದಿ ಸಾವಿಗೀಡಾಗಿದ್ದಾರೆ. ಬೈಬರ್ ಪುಂಕ್ವಾ ಪ್ರಾಂತ್ಯ ಅತೀ ಹೆಚ್ಚು ಹಾನಿ ಎದುರಿಸಿದ್ದು, 390 ಮಂದಿ ಸಾವಿಗೀಡಾಗಿದ್ದಾರೆ.

ಪಂಜಾಬ್‌ ಪ್ರಾಂತ್ಯ ದಲ್ಲಿ 164 ಮಂದಿ ಸಾವಿಗೀಡಾಗಿದ್ದಾರೆ. ಖೈಬರ್ ಪುಂಕ್ವಾದ ಬುನೇರ್ ಮತ್ತು ಶಾಂಗ್ಲಾ ಜಿಲ್ಲೆಗಳಲ್ಲಿ 150 ಮಂದಿ ನಾಪತ್ತೆ ಯಾಗಿದ್ದು, ಅಧಿಕಾರಿಗಳ ಪ್ರಕಾರ ಬುನೇರ್‌ನಲ್ಲಿ ಮದುವೆ ತಯಾರಿಯಲ್ಲಿದ್ದ ಒಂದೇ ಕುಟುಂಬದ 21 ಮಂದಿ ಸೇರಿ 31 ಮಂದಿ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ.

Delhi: ದೆಹಲಿ ಸಿಎಂ ರೇಖಾ ಗುಪ್ತಾಗೆ ವ್ಯಕ್ತಿಯಿಂದ ಕಪಾಳಮೋಕ್ಷ!! ಆರೋಪಿ ಬಂಧನ

Comments are closed.