Theam Park: ಕಾರ್ಕಳದ ಥೀಮ್ ಪಾರ್ಕ್ ಪರಶುರಾಮ ಪ್ರತಿಮೆ ಮರುನಿರ್ಮಾಣ – ಹಿತಾಸಕ್ತಿ ಅರ್ಜಿ ವಿಚಾರಣೆ

Theme Park: ಕಾರ್ಕಳದ ಥೀಮ್ ಪಾರ್ಕ್ ನಲ್ಲಿ ಪರಶುರಾಮ ಪ್ರತಿಮೆ ಮರುನಿರ್ಮಾಣ ಕೋರಿ ಪಿಐಎಲ್ ಉದಯ್ ಶೆಟ್ಟಿ ಮುನಿಯಾಲ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಾಡಿದೆ. ಈ ವೇಳೆ ಪ್ರತಿಮೆ ಬೇಕಿದ್ದರೆ ನಿಮ್ಮ ವೈಯಕ್ತಿಕ ಖಾತೆಯಿಂದ 5 ಲಕ್ಷ ರೂ. ಠೇವಣಿ ಇಡುತ್ತೀರಾ ಎಂದು ಅರ್ಜಿದಾರ ಉದಯ್ ಶೆಟ್ಟಿ ಅವರಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ.

5 ಲಕ್ಷ ಹಣ ಠೇವಣಿ ಇಡಲು ಅರ್ಜಿದಾರರ ಪರ ವಕೀಲರ ಒಪ್ಪಿಗೆ ನೀಡಿದ್ದು, 2 ವಾರದಲ್ಲಿ 5 ಲಕ್ಷ ರೂ. ಠೇವಣಿಯಿಡಲು ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಸಾವಿರಾರು’ಜನರ ನಂಬಿಕೆ ಉಳಿಯಬೇಕಾದರೆ ಅಲ್ಲಿ ಮತ್ತೆ ಪರಶುರಾಮ ಮೂರ್ತಿ ನಿರ್ಮಾಣವಾಗುವುದು ಅನಿವಾರ್ಯ. ಈ ಕಾರಣಕ್ಕೆ ಮೂರ್ತಿ ಪುನರ್ ನಿರ್ಮಾಣ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉದಯ್ ಶೆಟ್ಟಿ ಮುನಿಯಾಲ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಇಂದು ಹೈಕೋರ್ಟ್ ಕೈಗೆತ್ತಿ ಕೊಂಡಿತ್ತು.
‘ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ದುರಾಲೋಚನೆಯಿಂದ ಶಾಸಕರು ಪರಶುರಾಮ ಮೂರ್ತಿ ನಿರ್ಮಾಣ ಮಾಡಿ ಕಾರ್ಕಳದ ಜನತೆಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಕ್ಕೆ ಶಾಸಕ ಸುನಿಲ್ ಕುಮಾರ್ ವಿನಾಕಾರಣ ವಿರೋಧ ವ್ಯಕ್ತಪಡಿಸಿದ್ದರು. ಶಾಸಕರು ಆತಂಕಕ್ಕೆ ಒಳಗಾಗಿದ್ದರು ಎಂದು ಉದಯ ಶೆಟ್ಟಿ ಹೇಳಿದ್ದರು.
“ಕಂಚಿನ ಮೂರ್ತಿ ನಿರ್ಮಾಣ ಮಾಡುತ್ತೇನೆಂದು ಜನತೆಗೆ ಮಾತು ನೀಡಿ, ಫೈಬರ್ ಮತ್ತಿತರ ವಸ್ತುಗಳಿಂದ ನಿರ್ಮಾಣ ಮಾಡಿ ಜನರಿಗೆ ದ್ರೋಹ ಎಸಗಿದ್ದರು. ಈ ಬಗ್ಗೆ ಶಾಸಕರು ಸಮರ್ಥನೆ ಮಾಡುತ್ತಾ ಬಂದಿದ್ದರು. ಆದರೆ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಮೂರ್ತಿ ಕಂಚಿನದ್ದಲ್ಲ ಎಂಬ ವಿಚಾರ ಬಹಿರಂಗವಾಗಿತ್ತು.
Comments are closed.