Road Rules: ಕೇಂದ್ರ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ – ಎಲ್ಲಾ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಅನ್ವಯ – ಏನದು?

Road Rules: ಕೇಂದ್ರ ಸರ್ಕಾರದಿಂದ ಹೊರಬಿತ್ತು ಮತ್ತೊಂದು ಆದೇಶ. ದೇಶದ ಎಲ್ಲಾ ಸರ್ಕಾರಿ ಸಾಮ್ಯದ ಸಾರಿಗೆ ಸಂಸ್ಥೆಗಳಿಗೆ ಈ ಆದೇಶ ಅನ್ವಯವಾಗಲಿದೆ. ವಾಹನ ಹರಿದು ಪ್ರಾಣಿಗಳು ಸಾವನ್ನಪ್ಪುತ್ತಿರೋ ಹಿನ್ನಲೆ, ಈ ಕ್ರಮಗಳನ್ನು ಕೈಗೊಳಳಲು ಕೇಂದ್ರ ಸರ್ಕಾರ ಮುಂದಾಗಿದೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಮಹತ್ವದ ಸುತ್ತೋಲೆ ಹೊರಬಂದಿದ್ದು, ಪ್ರಾಣಿಗಳ ಮೇಲೆ ದಯೆ ಇರಲಿ ಎಂಬ ಘೋಷವಾಕ್ಯವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ. ಎಲ್ಲಾ ಬಸ್ ಗಳ ಹಿಂಬದಿ ಗಾಜಿನ ಮೇಲೆ ಬರೆಸುವಂತೆ ಸೂಚನೆ ನೀಡಲಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ ಗಳ ಮೇಲೆ ಬರೆಸುವಂತೆ ಸೂಚಿಸಲಾಗಿದೆ.
ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಬರೆಸುವಂತೆ ಸುತ್ತೋಲೆ ಹೊರಡಿಸಲಾಗಿದ್ದು, ಎಲ್ಲ ಬಸ್ ಗಳ ಮೇಲೆ ಬರೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಪತ್ರ ಬರೆದು, ಆದ್ಯತೆ ಮೇರೆಗೆ ಬರೆಸುವಂತೆ ಸೂಚನೆ ನೀಡಿದೆ.
ಹೇಗಿರಬೇಕು ಘೋಷವಾಕ್ಯ.?
– ಪ್ರಾಣಿಗಳ ಮೇಲೆ ದಯೆ ಇರಲಿ ಅಂತ ನಾಮಫಲಕ ಇರಬೇಕು.
– ಬಸ್ ಗಾಜಿನ ಹಿಂಬದಿಯ ವಿಂಡ್ ಶೀಲ್ಡ್ ಗ್ಲಾಸ್ ಮೇಲೆ ಬರೆಸಬೇಕು.
– ಅಕ್ಷರ 150 ಮಿ. ಮೀ ಇರುವಂತಿರಬೇಕು.
– ಅಕ್ಷರಗಳು ಹಳದಿ ಬಣ್ಣದಲ್ಲಿ ಇರಬೇಕು.
Supreme Court : ಅಪ್ರಾಪ್ತ ಬಾಲಕ, ಬಾಲಕಿಯರ ಪ್ರೀತಿ ಅಪರಾಧವಲ್ಲ – ಸುಪ್ರೀಂ ಕೋರ್ಟ್ ಅಭಿಪ್ರಾಯ
Comments are closed.