Heavy Rain: ಭಾರೀ ಮಳೆ ಹಿನ್ನೆಲೆ –ದಿಢೀರ್ ಕುಸಿದು ಬಿದ್ದ ಮನೆ – ಪ್ರಾಣಪಾಯದಿಂದ ಪಾರು

Heavy Rain: ಮಡಿಕೇರಿಯ ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ದಿವಂಗತ ಸುಲೀಖರವರ ಮನೆಯು ದಿಡೀರಾಗಿ ಕುಸಿದು ಬಿದ್ದು ಮನೆಯಲ್ಲಿ ಯಾರು ಈ ಸಂದರ್ಭದಲ್ಲಿ ವಾಸವಿರದ ಕಾರಣ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಈ ಮನೆಯ ಪಕ್ಕದಲ್ಲಿ ವಾಸವಾಗಿರುವ ಇವರದೇ ಇನ್ನೊಂದು ಕುಟುಂಬದವರ ಮಕ್ಕಳು ಆಗ ತಾನೆ ಊಟ ಮಾಡಿ ಪಕ್ಕದ ಕೋಣೆಗೆ ತೆರಳುವ ಸಂದರ್ಭದಲ್ಲಿ ಪಕ್ಕದ ಮನೆಯು ಇವರ ಮನೆ ಮೇಲೆ ಬಿದ್ದು ಸಂಪೂರ್ಣ ಜಕ್ಕಂ ಗೊಂಡ ಸಂದರ್ಭ ಅದೃಷ್ಟ ವಾತ್ ಅನಾಹುತದಿಂದ ಪಾರಾಗಿದ್ದಾರೆ

ವಿಷಯ ತಿಳಿದ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪನವರು ಹಾಗೂ ಪಂಚಾಯತಿ ಅಧ್ಯಕ್ಷರಾದ ಸುನಿಲ್ ಕುಮಾರ್ ರವರು ಮನೆಯವರಿಗೆ ಧೈರ್ಯ ಹೇಳಿ ಮನೆಯಲ್ಲಿ ಇದ್ದವರನ್ನು ಅವರ ನೆಂಟರ ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಕಲ್ಪಿಸಿದರು. ಕಂದಾಯ ಪರಿವೀಕ್ಷಕರಾದ ಪ್ರಶಾಂತ್ ರವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪನವರು ರಫೀಕ್ ರವರು ಆಲಿ ಕುಟ್ಟಿಯವರು ಗ್ರಾಮಸ್ಥರಾದ ಮೊಹಮ್ಮದ್ ಶರೀಫ್ ಸೈದು ಬಶೀರ್ ಹಾಗೂ ಸ್ಥಳೀಯರು ಸೇರಿ ಮಳೆ ಬಂದರೆ ಮನೆಗೆ ಹಾನಿಯಾಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಮುಚ್ಚಿ ಸಹಕರಿಸಿದರು.
Comments are closed.