Virendra Heggade: ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಆರೋಪ: ಡಾ.ಡಿ.ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

Share the Article

Virendra Heggade: ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಮಾಡಲಾಗಿದೆ ಎನ್ನುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು, ನೈತಿಕವಾಗಿ ತಪ್ಪು ಎಂದು ರಾಜ್ಯ ಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆಗಳ ಆರೋಪಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆಯನ್ ‘ಆಧಾರರಹಿತ, ಸುಳ್ಳು ಮತ್ತು ನೈತಿಕವಾಗಿ ತಪ್ಪು’ ಎಂದು ಕರೆದಿದ್ದಾರೆ. ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ಆರೋಪಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ. ಸತ್ಯಾಂಶ ಶೀಘ್ರವೇ ಹೊರಬರಲಿ ಎಂದು ಅವರು ಪಿಟಿಐ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೂ ಈ ಪ್ರಕರಣದ ಕುರಿತು ರಚನೆ ಮಾಡಿರುವ ವಿಶೇಷ ತನಿಖಾ ತಂಡವನ್ನು ಅವರು ಸ್ವಾಗತ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಂದ ತೀವ್ರ ನೋವಾಗಿದೆ ಎಂದು ಹೇಳಿದ ಅವರು, ಭಕ್ತರನ್ನು ದಾರಿತಪ್ಪಿಸುವ ಉದ್ದೇಶದಿಂದ ಈ ಅಪಪ್ರಚಾರ ಮಾಡಲಾಗುತ್ತಿದೆ. ನಾವು ನಮ್ಮೆಲ್ಲಾ ದಾಖಲೆಗಳನ್ನು ಮುಕ್ತವಾಗಿಟ್ಟಿದ್ದೇವೆ ತನಿಖೆಯು ಆದಷ್ಟು ಬೇಗ ಪೂರ್ಣಗೊಂಡು, ಸತ್ಯ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.

Viral Video : ಹೋಂ ವರ್ಕ್ ತಪ್ಪಿಸಿಕೊಳ್ಳಲು ಹೈಡ್ರಾಮ – ಮೈ ಮೇಲೆ ದೆವ್ವ ಬಂದಂತೆ ನಟಿಸಿದ ವಿದ್ಯಾರ್ಥಿ

Comments are closed.