Home News Viral Video : ಹೋಂ ವರ್ಕ್ ತಪ್ಪಿಸಿಕೊಳ್ಳಲು ಹೈಡ್ರಾಮ – ಮೈ ಮೇಲೆ ದೆವ್ವ ಬಂದಂತೆ...

Viral Video : ಹೋಂ ವರ್ಕ್ ತಪ್ಪಿಸಿಕೊಳ್ಳಲು ಹೈಡ್ರಾಮ – ಮೈ ಮೇಲೆ ದೆವ್ವ ಬಂದಂತೆ ನಟಿಸಿದ ವಿದ್ಯಾರ್ಥಿ

Hindu neighbor gifts plot of land

Hindu neighbour gifts land to Muslim journalist

Viral Video : ಇಂದಿನ ಮಕ್ಕಳು ಎಷ್ಟು ಬುದ್ಧಿವಂತರೋ ಅಷ್ಟೇ ಕಿಲಾಡಿಗಳು ಹೌದು ಎನ್ನಬಹುದು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಇನ್ನೊಬ್ಬ ಶಾಲಾ ಬಾಲಕನ ವಿಡಿಯೋ ವೈರಲಾಗುತ್ತಿದೆ

ಹೌದು, ವೈರಲ್ ಆದ ವಿಡಿಯೋದಲ್ಲಿ ಶಾಲೆಯ ವಿದ್ಯಾರ್ಥಿಯೊಬ್ಬ ಹೋಂವರ್ಕ್ ತಪ್ಪಿಸಿಕೊಳ್ಳಲು ತನ್ನ ಮೇಲೆ ದೆವ್ವ ಬಂದಂತೆ ಮಾಡಿದ್ದಾನೆ. ಹುಡುಗನ ಆಕ್ಟಿಂಗ್ ನೋಡಿ ಶಿಕ್ಷಕರು ಶಾಕ್ ಆಗಿ ಹೋಗಿದ್ದಾರೆ. the daily guru ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ಕನ್ನಡ ಮೀಡಿಯಾಂನ ಸರ್ಕಾರಿ ಶಾಲೆಯಂತೆ ಕಾಣುತ್ತಿದ್ದು, ಹುಡುಗನೊಬ್ಬನು ಚೇರ್ ಮೇಲೆ ಕುಳಿತಿಕೊಂಡಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಶಿಕ್ಷಕರು ಯಾಕೆ ಹೋಮ್ ವರ್ಕ್ ಮಾಡಿಲ್ಲ ಎಂದು ಕೇಳಿದ್ದಾರೆ. ಹೋಮ್ ವರ್ಕ್ ಸುದ್ದಿ ಕೇಳುತ್ತಿದ್ದಂತೆ ಮೈ ಮೇಲೆ ದೆವ್ವ ಬಂದಂತೆ ನಟನೆ ಮಾಡಲು ಶುರು ಮಾಡಿದ್ದಾನೆ. ಯಾಕೆ ಹೋಮ್ ವರ್ಕ್‌ ಮಾಡಿಲ್ಲ ಎನ್ನುತ್ತಿದ್ದಂತೆ ಅಪ್ಪನ ಕೇಳು ಎಂದು ಕಣ್ಣುಮುಚ್ಚಿಕೊಂಡು ಉತ್ತರ ನೀಡಿದ್ದಾನೆ.

ಅಲ್ಲೇ ಇದ್ದ ಶಿಕ್ಷಕರು ಯಾರ ಅಪ್ಪನ ಕೇಳ್ಬೇಕು ಎಂದು ಪ್ರಶ್ನೆ ಕೇಳುತ್ತಿದ್ದಂತೆ ನಾನು ಮೈಮೇಲೆ ಬಂದಿದ್ನಲ್ಲ ಆ ಯುವಕನ ಅಪ್ಪನನ್ನು ಕೇಳು ಎಂದು ಹೇಳುತ್ತಾನೆ. ಆ ಬಳಿಕ ಈ ಹುಡುಗನು ನಾನು ಹೋಗ್ಬೇಕು ಎಂದು ಹೇಳ್ತಾನೆ. ಇನ್ನು ಸಿನಿಮಾದಲ್ಲಿ ನಟನೆ ಮಾಡಿದ್ದೀಯಾ ಏನು, ನಿನ್ ಹೆಸರೇನಪ್ಪ ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಆತ ಫೋನ್ ಮಾಡಿ ಕೇಳು ಎಂದು ಹೇಳುತ್ತಾನೆ. ಯಾರನ್ನು ಎಂದು ಶಿಕ್ಷಕರು ಕೇಳುತ್ತಿದ್ದಂತೆ ಆತ ಇವರಪ್ಪಂಗೆ ಕಾಲ್ ಮಾಡಿ ಕೇಳು. ನಾನಿದ್ದೀನಲ್ಲ, ಈ ಹುಡುಗನ ಅಪ್ಪನ ಕೇಳು ಅವರಿಗೆ ಗೊತ್ತಾಗುತ್ತೆ ಎಂದು ಹೇಳಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ಅಲ್ಲದೆ ನಿನ್ ಹೆಸರೇನು ಎಂದು ಕೇಳಿದ್ರೆ ನಾನು ಹೇಳಲ್ಲ, ನಾನು ಅವರ ಮನೆ ಕಾಯುವುದಕ್ಕೋಸ್ಕರ ಬಂದಿದ್ದೇನೆ ಎಂದು ಹೀಗೆ ಅರ್ಥವಿಲ್ಲದಂತೆ ಏನೇನೋ ಮಾತನಾಡುತ್ತಿದ್ದಾನೆ. ಅಲ್ಲೇ ಇದ್ದ ಶಿಕ್ಷಕಿಯೊಬ್ಬರು ಯಾರಿಗೆ ಫೋನ್ ಮಾಡ್ಬೇಕು ಎಂದು ಕೇಳುತ್ತಿದ್ದಂತೆ, ಅವರಪ್ಪನಿಗೆ ಕಾಲ್ ಮಾಡು ನಾನು ಮೈಮೇಲೆ ಬಂದ ಹುಡುಗನ ಅಪ್ಪನಿಗೆ ಫೋನ್ ಮಾಡಿ ಇದು ನ್ಯಾಯನ ಅಂತ ಕೇಳಿ ಅವರಿಗೆ ಗೊತ್ತು ಎಂದು ಬಾಲಕನ ಈ ವಿಡಿಯೋದಲ್ಲಿ ಹೇಳುವುದನ್ನು ನೋಡಬಹುದು.

https://www.instagram.com/reel/DMYQ_NyTF7q/?igsh=MWg5YTg2bzB3NWR6MA==

Bengaluru Traffic: ಬೆಂಗಳೂರು ನಗರ ಸಂಚಾರ ದಟ್ಟಣೆ – ಟನಲ್ ರಸ್ತೆಯೇ ಪರಿಹಾರ – ಡಿಸಿಎಂ ಡಿ.ಕೆ. ಶಿವಕುಮಾರ್