Mysore Dasara: ಎರಡನೇ ತಂಡದ 5 ಆನೆಗಳು ಆ. 25ಕ್ಕೆ ಮೈಸೂರಿಗೆ ಆಗಮನ – ಪೂಜಾ ವಿಧಿವಿಧಾನದೊಂದಿಗೆ ಸ್ವಾಗತ

Share the Article

Mysore Dasara: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಎರಡನೇ ತಂಡದಲ್ಲಿ 3 ಹೊಸವೂ ಸೇರಿದಂತೆ ಐದು ಆನೆಗಳು ಆ.25ರಂದು ಸಂಜೆ 4 ಗಂಟೆಗೆ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣ ಪ್ರವೇಶಿಸಲಿವೆ.

ಈಗಾಗಲೇ ಮೊದಲ ತಂಡದಲ್ಲಿ ಆಗಮಿಸಿರುವ 9 ಆನೆಗಳು ಜಂಬೂ ಸವಾರಿ ಮಾರ್ಗದಲ್ಲಿ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ. ದಸರಾ ಉದ್ಘಾಟನೆಗೂ 29 ದಿನ ಮುನ್ನ ಎರಡನೇ ತಂಡದ ಆನೆಗಳನ್ನು ಕರೆತರಲು ಮುಹೂರ್ತ ಫಿಕ್ಸ್ ಮಾಡಲಾಗಿದೆ. ಸೆ.22ರಿಂದ ಈ ಸಾಲಿನ ದಸರಾ ಮಹೋ ತ್ಸವ ಆರಂಭವಾಗಲಿದ್ದು, ಅ.2ರಂದು ಜಂಬೂಸವಾರಿ ನೆರವೇರಲಿದೆ.

ಎರಡನೇ ತಂಡ: ಎರಡನೇ ತಂಡದಲ್ಲಿ ಕರೆತರುತ್ತಿರುವ 5 ಆನೆಗಳಲ್ಲಿ ಎರಡು ಹೆಣ್ಣಾನೆ ಹಾಗೂ ಒಂದು ಹೊಸ ಗಂಡಾನೆ ಸೇರಿವೆ. ಅದರಲ್ಲಿ ದುಬಾರೆ ಕ್ಯಾಂಪ್‌ನಿಂದ ಗೋಪಿ(43), ಸುಗ್ರೀವ (43), ಹೊಸ ಆನೆಗಳಾದ ಮತ್ತಿಗೋಡು ಕ್ಯಾಂಪ್‌ ನಿಂದ ಶ್ರೀಕಂಠ(56), ದುಬಾರೆಯಿಂದ ಹೇಮಾವತಿ(11) ಹಾಗೂ ಭೀಮನಕಟ್ಟೆ ಕ್ಯಾಂಪ್‌ನಿಂದ ರೂಪ(44) ಮೈಸೂರಿಗೆ ಆಗಮಿಸುತ್ತಿವೆ.

ಮೊದಲ ತಂಡದ ಆನೆಗಳು: ಮೊದಲ ತಂಡದಲ್ಲಿ ಆಗಮಿಸಿರುವ ಮತ್ತಿಗೋಡು ಕ್ಯಾಂಪ್‌ನ ಗಜಪಡೆಯ ನಾಯಕ ಅಭಿಮನ್ಯು(59), ಭೀಮ(25), ದುಬಾರೆ ಕ್ಯಾಂಪ್‌ನಿಂದ ಪ್ರಶಾಂತ(53), ಧನಂಜಯ (45), ಕಂಜನ್ (26), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ(ದೊಡ್ಡಹರವೆ) ಲಕ್ಷ್ಮೀ(53) ಹೆಣ್ಣಾನೆ ಗಳು ಈಗಾಗಲೇ ತಾಲೀಮಿನಲ್ಲಿ ನಿರತ ವಾಗಿವೆ. 14 ಆನೆಗಳಲ್ಲಿ ಕ್ಯಾಪ್ಟನ್ ಅಭಿ ಮನ್ಯು (59) ಹಿರಿಯ ಆನೆ ಹೆಗ್ಗಳಿಕೆಗೆ ಪಾತ್ರ ವಾಗಿದ್ದರೆ, ದುಬಾರೆ ಕ್ಯಾಂಪ್‌ನ ಹೇಮಾವತಿ (1) ಅತ್ಯಂತ ಕಿರಿಯ ಆನೆ ಎನಿಸಿಕೊಂಡಿದೆ.

Saalumarada Thimmakka: ಬೇಲೂರು ತಹಶೀಲ್ದಾರ್‌ ವಿರುದ್ಧ ಪರಂಗೆ ಸಾಲು ಮರದ ತಿಮ್ಮಕ್ಕ ದೂರು

Comments are closed.