Snake rescue: ಬೀದಿ ನಾಯಿಗಳಿಗೆ ಬಿರಿಯಾನಿ ಹಾಕ್ತಿದ್ದೀರಿ! – ಹಾವು ಹಿಡಿಯುವುದನ್ನು ಕಾನೂನಾತ್ಮಕ ಮಾಡಿ – ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಾವು ಹಿಡಿಯುವವರ ಪ್ರತಿಭಟನೆ

Share the Article

Snake rescue: ಹಾವು ಹಿಡಿಯುವುದನ್ನು ಕಾನೂನಾತ್ಮಕ ಮಾಡಿ, ಹಾವು ಹಿಡಿಯುವುದಕ್ಕೆ ಮಾನ್ಯತೆ ಕೊಡಿ ಎಂದು ಇಂದು ಫ್ರೀಡಂಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಾವು ಹಿಡಿಯುವವರ ಬೆಳಿಗ್ಗೆ 10 ಗಂಟೆಗೆ ವನ್ಯಜೀವಿ ಸಂರಕ್ಷಕರು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾವು ಹಿಡಿಯುವವರು ಭಾಗಿಯಾಗಿದ್ದಾರೆ.

ರಾಜಧಾನಿ ಸೇರಿ ರಾಜ್ಯದಲ್ಲಿ ಅನ್ಯಾಯಕ್ಕೆ ಒಳಪಟ್ಟಿರುವ ಸ್ನೇಕ್ ರೆಸ್ಕ್ಯೂರರ್ಸ್, ಮಾನ್ಯತೆ ಕೊಡಲಿಲ್ಲ‌ ಅಂದ್ರೆ ಹಾವು ಹಿಡಿಯಲ್ಲ ಎಂಬ ನಿರ್ಧಾರ ಮಾಡಿ ಪ್ರತಿಭಟನೆ ಕೈಗೊಂಡಿದ್ದಾರೆ. ಒಂದು ವೇಳೆ ಕೆಲಸ ನಿಲ್ಲಿಸಿದ್ರೆ ನಗರದಲ್ಲಿ ಪ್ರತಿದಿನ 200 ರಿಂದ 300 ಹಾವುಗಳು ಸಾವಿಗೆ ಸರ್ಕಾರ ಕಾರಣವಾಗುತ್ತದೆ. ರಾಜ್ಯದಲ್ಲಿರುವ ಸುಮಾರು 700 ರೆಸ್ಕ್ಯೂರರ್ಸ್ ಇದ್ರೆ, ನಗರದಲ್ಲಿ 50 ಮಂದಿ ಹಾವು ಹಿಡಿಯುವವರು ಇದ್ದಾರೆ. ಹಾವು ಹಿಡಿಯುವ ವೃತ್ತಿಗೆ ಮಾನ್ಯತೆ ಕೊಡಿ ಎಂದು ಮನವಿ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೀದಿ ನಾಯಿಗಳಿಗೆ ಬಿರಿಯಾನಿ ಹಾಕುತ್ತಿದ್ದೀರಾ. 8 ರಿಂದ 10 ಕೋಟಿ ಬಿರಿಯಾನಿ ಹಾಕೋಕೆ ಖರ್ಚು ಮಾಡುತ್ತಿದ್ದೀರಾ. ಆದ್ರೆ ಲಕ್ಷಾಂತರ ಜನ ವನ್ಯಜೀವಿ ಸಂರಕ್ಷರು ನಿಮಗೆ ಕಾಣಿಸುತ್ತಿಲ್ವ.? ನಮಗೆ ಒಂದು ಹಾವು ಹಿಡಿಯುವ ಸ್ಟೀಕ್ ಕೊಟ್ಟಿಲ್ಲ. ಶೂ ಕೊಟ್ಟಿಲ್ಲ ಅರಣ್ಯ ಇಲಾಖೆ. ಹುಲಿ ಕೊಂದ್ರು ಒಂದೇ ಕೇಸ್, ಹಾವು ಕೊಂದ್ರು ಒಂದೇ ಕೇಸ್ ಹಾಕ್ತಾರೆ. ಆದ್ರೆ ಹಾವು ಸಂರಕ್ಷಕರಿಗೆ ಯಾವುದೇ ಸಂರಕ್ಷಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಪ್ರತಿಭಟನಾಕಾರರು.

ಮಹಾರಾಜ ಕಾಲದಿಂದಲೂ ಇರುವ ವೃತ್ತಿ. ಆದರೆ ಕೆಲಸ ನಂತರ ಕ್ಯಾರೆ ಅನ್ನಲ್ಲ ಎಂಬ ಆಕ್ರೋಶ ಹಾವು ಹಿಡಿಯುವವರದ್ದು. ವೃತ್ತಿ ಅಂತ ಪರಿಗಣಿಸಿಲ್ಲ. ಸಾಕಷ್ಟು ರೆಸ್ಕ್ಯೂರರ್ಸ್ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದೆ. ಸ್ನೇಕ್ ರೆಸ್ಕ್ಯೂರರ್ಸ್ ಪ್ರತಿಭಟನೆ ಮಧ್ಯೆ ಹಾವು ಕಡಿತದ ಹಾವಳಿ ಹೆಚ್ಚಳ. ರಾಜ್ಯದಲ್ಲಿ ಹತ್ತು ಸಾವಿರ ಗಡಿಯತ್ತ ಹಾವು ಕಡಿತ ಪ್ರಕರಣಗಳ ಸಂಖ್ಯೆ ದಾಖಲಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚುತ್ತಿದೆ.

ಕಳೆದ ಒಂದೇ ವಾರದಲ್ಲಿ 262 ಹಾವು ಕಡಿತವಾದ್ರೆ 4 ಜನರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ 9177 ಜನರಿಗೆ ಹಾವ ಕಚ್ಚಿವೆ. ಇನ್ನು 72 ಜನರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ದಾಖಲೆಯ ಪ್ರಮಾಣದಲ್ಲಿ ಸ್ನೇಕ್ ಬೈಟ್ ಹೆಚ್ಚಾಗಿದ್ರೆ ಮತ್ತೊಂದೆಡೆ ಹಾವಿನ ಕಡಿತದಿಂದ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಹಾವು ಕಡಿತದ ಪ್ರಕರಣ ಏರಿಕೆ ಹಿನ್ನಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗೆ ಮುಂದಾಗಿದೆ. ಈ ಮಧ್ಯೆ ಇಂದು ವನ್ಯಜೀವಿ ಸಂರಕ್ಷಕರಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಹಾವು ಹಿಡಿಯುವವರ ಬೇಡಿಕೆಗಳು.

1. ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ವನ್ಯಜೀವಿಗಳಿಂದ ರಕ್ಷಣೆ ವೇಳೆಯಲ್ಲಿ ಆಕಸ್ಮಿಕವಾಗಿ ಸಾವನಪ್ಪಿದಾಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು

2. ವನ್ಯಜೀವಿ ಸಂರಕ್ಷರು, ಹಾವುರಕ್ಷಕರಿಗೆ ರಕ್ಷಣೆ ವೇಳೆಯಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾದಾಗ ವೈದ್ಯಕೀಯ ವೆಚ್ಚವನ್ನು ಭರಿಸಬೇಕು

3. ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ವನ್ಯಜೀವಿಗಳಿಂದ ದಾಳಿಗೆ ಒಳಗಾದಾಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು

4. ವನ್ಯಜೀವಿ ಸಂರಕ್ಷರಿಗೆ ಮಾಸಿಕ ಗೌರವಧನ ನೀಡುವ ಯೋಜನೆ ರೂಪಿಸಬೇಕು

5. ವನ್ಯಜೀವಿ ಸಂರಕ್ಷಕರಿಗೆ ಹಾವು ರಕ್ಷಕರಿಗೆ ಅಧಿಕೃತವಾಗಿ ತರಬೇತಿ, ಕೌಶಲ್ಯ ನೀಡಿ ಸಲಕರಣೆಗಳನ್ನು ನೀಡಬೇಕು

6. ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ಜೀವವಿಮೆ ಮತ್ತು ಆರೋಗ್ಯವಿಮೆ ಮಾಡಿಸಬೇಕು

7. ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರಿಗೆ ಪರವಾನಿಗೆ ಹಾಗೂ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಇಲಾಖೆಯಿಂದ ನೀಡಬೇಕು

8. ವನ್ಯಜೀವಿ ಸಂರಕ್ಷಕರ ತುರ್ತು ಪರಿಸ್ಥಿತಿ ನಿಧಿ ಸ್ಥಾಪಿಸಬೇಕು

Accident: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಸ್ಥಳದಲ್ಲೇ ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ

Comments are closed.