‌Mangalore: ಶಾಸಕ ಹರೀಶ್‌ ಪೂಂಜಾ ಹೇಳಿಕೆ ಉಲ್ಲೇಖಿಸಿ ನಾನು ಹೇಳಿದ್ದು; ಮಹೇಶ್‌ ತಿಮರೋಡಿ ಪ್ರತಿಕ್ರಿಯೆ

Share the Article

‌Mangalore: ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿರುವ ಮಹೇಶ್‌ ತಿಮರೋಡಿ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಮಹೇಶ್‌ ತಿಮರೋಡಿ ವಿರುದ್ಧ ಕೇಸ್‌ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್‌ ಸೂಚನೆ ವಿಚಾರವಾಗಿ ಮಹೇಶ್‌ ತಿಮರೋಡಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಹೇಳಿಕೆ ಇಂದು ಇಡೀ ವಿಧಾನಸಭೆಯನ್ನು ಗಡಗಡ ನಡುಗಿಸಿದೆ. ಅಂದರೆ ಒಳ್ಳೆಯ ವಿಚಾರವೇ. ಅಂದು ನಾನು ಕೊಟ್ಟ ಹೇಳಿಕೆ ಇಂದು ಚರ್ಚೆಯಾಗಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿಲ್ಲ. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದು, ಶಾಸಕ ಹರೀಶ್‌ ಪೂಂಜಾ. ಅವರ ಹೇಳಿಕೆಯನ್ನು ಉಲ್ಲೇಖ ಮಾಡಿ ನಾನು ಹೇಳಿದ್ದೆ. ಶಾಸಕ ಹರೀಶ್‌ ಪೂಂಜಾ ಹೇಳಿಕೆಯನ್ನು ನಾನು ಪ್ರಶ್ನೆ ಮಾಡಿದ್ದೇನೆ. ನನ್ನ ಹೇಳಿಕೆ ಇವರಿಗೆ ಅರ್ಥವಾಗಿಲ್ಲ ಅಷ್ಟೇ. ಹರೀಶ್‌ ಪೂಂಜಾ ಹೀಗೆ ಆರೋಪ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡಿ. ಇಲ್ಲವೇ ಹರೀಶ್‌ ಪೂಂಜಾ ವಿರುದ್ಧ ಕ್ರಮ ಕೈಗೊಳ್ಳಿ. ನಾನೇ ಆ ಹೇಳಿಕೆ ನೀಡಿದ್ದು ಹೌದಾದರೆ, ನನ್ನ ತಲೆದಂಡವಾಗಲಿ. ಇಲ್ಲದಿದ್ದಲ್ಲಿ, ಎರಡು ಮೂರು ದಿನದಿಂದ ಸದನದಲ್ಲಿ ಯಾರು ಬೊಬ್ಬೆ ಹೊಡೆಯುತ್ತಿದ್ದಾರೋ ಅವರದ್ದು ತಲೆದಂಡವಾಗಲಿ ಎಂದು ಗ್ಯಾರಂಟಿ ನ್ಯೂಸ್‌ ಮಾಧ್ಯಮಕ್ಕೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ವಿಚಾರವಾಗಿ ಇಂದು ಬಿಜೆಪಿ ಶಾಸಕರಲ್ಲಿ ಮಾತನಾಡಿಸಿದ್ದು ಆ ಅಣ್ಣಪ್ಪ ಮಂಜುನಾಥನೇ. ನಮ್ಮ ತಾಲೂಕಿನ ಪ್ರತಿನಿಧಿ ಹೇಳಿದ್ದಕ್ಕೆ ನಾನು ಅದನ್ನು ಅಲ್ಲಿ ಉಲ್ಲೇಖ ಮಾಡಿದ್ದೆ. ಪ್ರತಿನಿಧಿಯಾಗಿರುವ ಹರೀಶ್‌ ಪೂಂಜಾ ಮೇಲೆ ನಮಗೆ ನಂಬಿಕೆಯಿತ್ತು. ಅವರು ಹೇಳಿದ್ದನ್ನು ನಾನು ನಂಬಿ ಈ ಮಾತನ್ನು ಹೇಳಿದ್ದೇವೆ. ಹರೀಶ್‌ ಪೂಂಜಾ ಹೇಳಿದ್ದನ್ನು ನಾವು ಒಪ್ಪಿಕೊಂಡಿದ್ದೇವೆ. ಅದನ್ನು ಇಲ್ಲ ಎಂದು ಹೇಳಬೇಕಾದವರು ಸಿಎಂ ಸಿದ್ದರಾಮಯ್ಯ ಅವರು ಎಂದು ಮಾಧ್ಯಮಕ್ಕೆ ತಿಳಿಸಿದರು.

Dharmasthala Case: ಧರ್ಮಸ್ಥಳ ಕೇಸ್‌: ಯೂಟ್ಯೂಬರ್ಸ್‌ಗಳ ವಿರುದ್ಧ FIR ದಾಖಲು ಮಾಡಿ ತನಿಖೆ ನಡೆಸಲು ಬಿ.ವೈ.ವಿಜಯೇಂದ್ರ ಆಗ್ರಹ

Comments are closed.