Urea Effect: ಯೂರಿಯಾ ಎಂಬ ಮಾರಿಯ ಹಿಂದೆ ಜೋತು ಬಿದ್ದ ಅನ್ನದಾತರು – ನಮ್ಮ ಗೋರಿ ತೋಡುವ ಯೂರಿಯಾ – ರೈತರೇ ಎಚ್ಚರ

Share the Article

Urea Effect: ಯೂರಿಯಾ ಸಾರಜನಕಯುಕ್ತ ರಸಗೊಬ್ಬರ. ರೈತರು ತಮ್ಮ ಕೃಷಿಗೆ ಹೆಚ್ಚಿನವರು ಇದನ್ನೇ ಬಳಸುತ್ತಾರೆ. ಈ ಕಾರಣದಿಂದಲೇ ಇಂದು ಯುರೀಯಾ ಕೊರತೆ ರಾಜ್ಯದಲ್ಲಿ ದಾಂಧಲೆ ಎಬ್ಬಿಸಿದೆ. ಸಂಪಾದಾಯಿಕ ಗೊಬ್ಬರ ಹಟ್ಟಿ ಗೊಬ್ಬರ ಬದಲು ಇತ್ತೀಚೆಗೆ ಈ ಯೂರಿಯಾವನ್ನೇ ಬಳಸಲಾಗುತ್ತದೆ.

ಇದು ಬೆಳೆಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶವಾಗಿದೆ ಎಂದು ಎಲ್ಲರೂ ಭಾವಿಸುತ್ತಾರೆ. ಅಲ್ಲದೆ ಹಟ್ಟಿ ಗೊಬ್ಬರಕ್ಕಾಗಿ ಪಡುವ ಪಾಡು ಇದರಲ್ಲಿ ಇಲ್ಲ. ಹಣವಿದ್ದರೆ ಸೀದ ಪೇಟೆಗೆ ಹೋಗುವುದು ತರೋದು ಅಷ್ಟೆ. ಆದರೆ ಇದರಿಂದ ನಿಜವಾಗಿಯೂ ಕೃಷಿಗೆ ಲಾಭ ಇದೆಯಾ? ಇದು ಭೂಮಿಗೆ ಎಷ್ಟು ಸೂಕ್ತ ಅನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬಹು ಸಂಖ್ಯಾತ ರೈತರು ಗೋ ಸಾಕಾಣೆಯಿಂದ ದೂರ ಉಳಿದಿರುವ ಕಾರಣ ಕೊಟ್ಟಿಗೆ ಗೊಬ್ಬರದ ಕೊರತೆ ಹಿನ್ನೆಲೆಯಲ್ಲಿ ಬಹುತೇಕ ರೈತರು ಯುರಿಯಾ ಗೊಬ್ಬರದ ಮೊರೆ ಹೋಗಿದ್ದಾರೆ. ಇದು ಭೂರಮೆಯ ಮಡಿಲನ್ನು ವಿಲಕ್ಷಣಗೊಳಿಸುತ್ತದೆ. ಗೋ ಸಾಗಾಣಿಕೆ ಮಾಡುವ ಕೆಲವರು ಹಣದ ಆಸೆಗೆ ತಮ್ಮಲ್ಲಿಯ ಕೊಟ್ಟಿಗೆ ಗೊಬ್ಬರ ಮಾರಿ ತಮ್ಮ ಭೂಮಿಗೆ ಯೂರಿಯಾ ಎಂಬ ಮಾರಿಯನ್ನು ಸುರಿಯುತ್ತಾರೆ.

ಸಹನೆ ಕಳೆದುಕೊಂಡ ಅನ್ನದಾತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ದಿಢೀರ್ ಫಲಿತಾಂಶ ಅಪೇಕ್ಷಿಸುವ ದುರಾಸೆಯಿಂದ ಅತೀಯಾದ ಯೂರಿಯಾ ಬಳಕೆಯಿಂದ ಭೂಮಿಯ ನಾಲ್ಕಾರು ಅಡಿ ಕೆಳಗಡೆ ನೀರಿಂಗುವ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತದೆ. ಇದೇ ಕಾರಣದಿಂದಾಗಿ ಕೊಳವೆ ಬಾವಿಯಲ್ಲಿನ ನೀರು ಖಾಲಿ ಖಾಲಿ. ಪುನಃ ಪುನಃ ಕೊಳವೆ ಬಾವಿ ಕೊರೆಸುವ ಮೂಲಕ ದುಡಿದ ಹಣವೆಲ್ಲಾ ಅನ್ನದಾತರು ಮಣ್ಣುಪಾಲು ಮಾಡಿಕೊಳ್ಳುತ್ತಿದ್ದಾರೆ.

ಯೂರಿಯಾ ಬಳಕೆಯಿಂದ ಭೂಮಿಯ ಆರೋಗ್ಯ ಮತ್ತು ಮಾನವರ ಆರೋಗ್ಯಕ್ಕೂ ಕುತ್ತು ಬರುತ್ತದೆ. ರಾಸಾಯನಿಕ ಬಳಕೆ ಮತ್ತು ಕ್ರಿಮಿನಾಶಕಗಳ ಬಳಕೆಗೆ ನಿಷೇಧವಾದರೆ ಮಾತ್ರ ನಮ್ಮ ಭೂಮಿಯ ಸಾವಯವ ಇಂಗಾಲ ಹೆಚ್ಚಲು ಸಾಧ್ಯ. ಹಾಗೆ ಕೊಳವೆಬಾವಿಯ ನೀರಿನ ಪ್ರಮಾಣ ಮೇಲೆಯೇ ಉಳಿಯುತ್ತದೆ. ರಾಸಾಯನಿಕ ಬಳಸದೇ ಇರುವ ಭೂಮಿಗೆ ಬಿದ್ದ ಮಳೆ ನೀರ ನೇರ ಅಂತರ್ಜಲ ಸೇರುತ್ತದೆ. ಇಲ್ಲವಾದಲ್ಲಿ ವಿಷಯುಕ್ತ ನೀರು ಅಂತರ್ಜಲದ ಜೊತೆ ಸೇರಿಕೋಲ್ಳುತ್ತದೆ.

ಯೂರಿಯಾ ಬಳಸದಂತೆ ರೈತರನ್ನು ಜಾಗೃತಿಗೊಳಿಸುವಲ್ಲಿ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದು, ಮತ್ತಷ್ಟು ಅದನ್ನೇ ಬಳಸುವಂತೆ ಉತ್ತೇಜನ ನೀಡುತ್ತಿದೆ ಸರ್ಕಾರ. ಅದರಲ್ಲೂ ಈಗ ನ್ಯಾನೋ ಯುರಿಯಾ ಬಳಕೆ ಬಗ್ಗೆ ರೈತರಿಗೆ ಹುಮ್ಮಸ್ಸು ನೀಡುತ್ತಿದೆ. ಭೂಮಿಯನ್ನು, ಪರಿಸರವನ್ನು, ಜನರ ಆರೋಗ್ಯವನ್ನು ಹಾಳುಗೆಡುವುತ್ತಿರುವ ರಾಸಾಯನಿಕಗಳ ಉತ್ಪಾದನೆಯನ್ನು ನಿಲ್ಲಿಸದಿರುವ ಸರ್ಕಾರಗಳನ್ನು ಇದಕ್ಕೆ ನೇರ ಹೊಣೆ ಮಾಡಬೇಕಾಗುತ್ತೆ.

ಯೂರಿಯಾವನ್ನು ರಿಯಾಯಿತಿ ದರದಲ್ಲಿ ವಿತರಿಸುವ ಸರ್ಕಾರದ ಕ್ರಮ ಖಂಡನೀಯ. ಯಾವ ರಸಗೊಬ್ನರಗಳನ್ನೂ ಬಳಸದೇ ಬೆಳೆಯುವ ಸಿರಿಧಾನ್ಯಗಳ ಕುರಿತು ಅಧಿಕಾರಿಗಳು ಮತ್ತು ಸರ್ಕಾರ ಪ್ರಚುರ ಪಡಿಸುವಲ್ಲಿ ಬದ್ಧತೆ ಇಟ್ಟುಕೊಂಡಿಲ್ಲ. ಎಲ್ಲಾ ಸಾಂಪ್ರದಾಯಿಕ ಬೆಳೆಗಳಿಗಿಂತ ಸಿರಿಧಾನ್ಯಗಳು ಹೆಚ್ಚು ಆದಾಯ ನೀಡುತ್ತವೆ ಎಂದು ರೈತರಿಗೆ ಮನವರಿಕೆ ಮಾಡುವಲ್ಲಿಯೂ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ವಿಫಲತೆಯ ಹಾದಿಯಲ್ಲಿದ್ದಾರೆ.

ಯೂರಿಯಾ ಬಳಸುವಾಗ ಮತ್ತು ನಂತರ ಎಷ್ಟೆಲ್ಲ ಅನಾಹುತಗಳು ನಡೆದ ಬಗ್ಗೆ ಸಾಕಾಷ್ಟು ವರದಿಗಳು ಬಂದಾಗ್ಯೂ ಜಾಣ ಕುರುಡರಂತಿದ್ದಾರೆ ಆಳುವ ದೊರೆಗಳು. ಅನ್ನದಾತರು ಸರ್ಕಾರಗಳ ಬಳಿ ಕೈ ಚಾಚುವ ಬದಲು ಸ್ವಾವಲಂಬಿ ನಿಟ್ಟಿನತ್ತ ಪಯಣ ಶುರುವಾಗಬೇಕು. ಆಗ ಮಾತ್ರ ಅನ್ನದಾತ ಎನ್ನುವ ಶಬ್ಧಕ್ಕೆ ಸಾರ್ಥಕ್ಯ ಸಿಕ್ಕಂತಾಗುತ್ತದೆ. ನಾವೇ ಸ್ವತಃ ನೈಸರ್ಗಿಕ, ಸಹಜವಾದ, ಭೂಮಿಯ ಆರೋಗ್ಯಕ್ಕೆ ಪೂರಕವಾದ ಮತ್ತು ಪುಕ್ಕಟೆ ಯೂರಿಯಾ ಸಿದ್ಧಪಡಿಸಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಸಿಗುವ ಯೂರಿಯಾ ಎನ್ನುವ ಮಾರಿ ನಮ್ಮ ಗೋರಿ ತೋಡದೇ ಬಿಡುವುದಿಲ್ಲ ಮತ್ತು ಭೂಮಿಯ ಸ್ವಾಸ್ಥ್ಯ ಹಾಳು ಮಾಡದೇ ಬಿಡುವುದಿಲ್ಲ. ನಮ್ಮ ಮತ್ತು ಭೂಮಿಯ ಸ್ವಾಸ್ಥ್ಯ ಹಾಳುಗೆಡುವುವ ಯೂರಿಯಾ ಸೇರಿದಂತೆ ಇನ್ನೂ ಅನೇಕ ರಾಸಾಯನಿಕಗಳನ್ನು, ಯಾವುದೇ ವಿಷಗಳನ್ನು ನಾವು ಬಳಸದಂತಹ ಸಂಕಲ್ಪವನ್ನು ನಮ್ಮ ಭೂಮಿಯ ಮೇಲೆ ನಿಂತು ಮಾಡುವುದು ಅನಿವಾರ್ಯವಾಗಿದೆ.

Central Gvt: ಕಾರು ಬೈಕ್ ಖರೀದಿಗಾರರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್ – ದೀಪಾವಳಿ ವೇಳೆಗೆ ಭಾರೀ ಬೆಲೆ ಇಳಿಕೆ!!

Comments are closed.