Home News Heart attack: ಹೃದಯಾಘಾತ ಪ್ರಕರಣ ಪರಿಷತ್‌ನಲ್ಲಿ ಚರ್ಚೆ – ಎಲ್ಲಾ ಜಿಲ್ಲೆಗಳಲ್ಲಿ ಕ್ಯಾತಲ್ಯಾಬ್ ವ್ಯವಸ್ಥೆ ಮಾಡಿ...

Heart attack: ಹೃದಯಾಘಾತ ಪ್ರಕರಣ ಪರಿಷತ್‌ನಲ್ಲಿ ಚರ್ಚೆ – ಎಲ್ಲಾ ಜಿಲ್ಲೆಗಳಲ್ಲಿ ಕ್ಯಾತಲ್ಯಾಬ್ ವ್ಯವಸ್ಥೆ ಮಾಡಿ – ಆರೋಗ್ಯ ಸಚಿವರಿಗೆ ಮನವಿ

Hindu neighbor gifts plot of land

Hindu neighbour gifts land to Muslim journalist

Heart attack: ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹೃದಯಾಘಾತ ಪ್ರಕರಣಗಳ ಬಗ್ಗೆ ಪ್ರಶನೆ ಎತ್ತಿದರು. ಇದಕ್ಕೆ ಸಂಬಂಧಪಟ್ಟಂತೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದ್ದು, 45 ವರ್ಷದೊಳಗಿನವರು ಹಠಾತ್ ಹೃದಾಯಾಘಾತದಿಂದ ಮೃತಪಡ್ತಿರೋದು ಸರ್ಕಾರದ ಗಮನಕ್ಕಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ 1004 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂರು ವರ್ಷದಲ್ಲಿ ಜಯದೇವದಲ್ಲಿ 61299 ಜನ ಅಡ್ಮಿಟ್ ಆಗಿದ್ದು, ಇವರಲ್ಲಿ 45 ವರ್ಷದೊಳಗಿನ 472 ಜನ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಆರೋಗ್ಯ ಸಚಿವರು ಪರಿಷತ್‌ನಲ್ಲಿ ಮಾಹಿತಿ ನೀಡಿದರು.

ಇನ್ನು ಕಾರ್ಡಿಯಾಕ್ ಬೈಪಾಸ್ ಸರ್ಜರಿಗೆ ಮಧ್ಯ ಕರ್ನಾಟಕಭಾಗದಲ್ಲಿ ವ್ಯವಸ್ಥೆ ಮಾಡಬೇಕು. ಆರೋಗ್ಯದ ಬಗ್ಗೆಯೂ ಜನತೆಗೆ ಮಾಹಿತಿ ನೀಡಬೇಕು. ಎಲ್ಲ ಜಿಲ್ಲೆಗಳಲ್ಲಿ ಕ್ಯಾತಲ್ಯಾಬ್ ವ್ಯವಸ್ಥೆ ಮಾಡಬೇಕು ಎಂದು ಧನಂಜಯ ಸರ್ಜಿ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡುರಾವ್, ಅತಿಯಾದ ಮಾಲಿನ್ಯದಿಂದ ಹೃದಯಾಘಾತ ಆಗ್ತಿದೆ. ಮಾನಸಿಕ ಒತ್ತಡ, ಬೊಜ್ಜುತನವೂ ಕಾರಣ. ಬಿಪಿ, ಶುಗರ್ ಇರುವವರಿಗೆ ಶಾಶ್ವತವಾಗಿ ಔಷದ ನೀಡಬೇಕು. ಇದನ್ನ ನಿಯಂತ್ರಿಸಿದರೆ ಉಳಿದ ಖಾಯಿಲೆ ನಿಯಂತ್ರಣ ಆಗಲಿದೆ. 86 ಆಸ್ಪತ್ರೆಗಳಲ್ಲಿ ಕ್ಯಾತ್ಲಾಬ್ ಇದೆ. ಟೆಲಿ ಇಸಿಜಿ ಇಡಿ ರಾಜ್ಯಕ್ಕೆ ವಿಸ್ತರಣೆ ಮಾಡ್ತಿದ್ದೇವೆ. ಟೆನೆಕ್ಟೆಪ್ಲೆಸ್ ಇಂಜೆಕ್ಷನ್ ಕೂಡ ಟೆಲಿ ಇಸಿಜಿ ಇರುವ ಕಡೆ ಇರಲಿದೆ. ಅದೂ ಉಚಿತವಾಗಿ ನೀಡಲಾಗುತ್ತಿದೆ. Aid ಡಿವೈಸ್ ಕೂಡ ಎಲ್ಲ ಆಸ್ಪತ್ರೆಗೆ ನೀಡುತ್ತಿದ್ದೇವೆ ಎಂದು ಸದನಕ್ಕೆ ತಿಳಿಸಿದರು.

Ramalinga Reddy: ಧರ್ಮಸ್ಥಳ ಬಗ್ಗೆಯಾಗಲಿ, ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ