Home News Dharmasthala : ಧರ್ಮಸ್ಥಳ ಪ್ರಕರಣ – ಅನಾಮಿಕನ ಹಿಂದೆ ಇರೋದು ಮಾಜಿ ಡಿಸಿ, ಯಶ್‌ಪಾಲ್‌ ಸುವರ್ಣ...

Dharmasthala : ಧರ್ಮಸ್ಥಳ ಪ್ರಕರಣ – ಅನಾಮಿಕನ ಹಿಂದೆ ಇರೋದು ಮಾಜಿ ಡಿಸಿ, ಯಶ್‌ಪಾಲ್‌ ಸುವರ್ಣ ಹೊಸ ಬಾಂಬ್‌

Hindu neighbor gifts plot of land

Hindu neighbour gifts land to Muslim journalist

Dharmasthala : ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಮುತ್ತ ಕಾಡಿನಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ (Mass burial case) ಹೇಳಿರುವ ಅನಾಮಿಕನ ದೂರಿನ ಮೇರೆಗೆ ಎಸ್ಐಟಿ ತನಿಖೆ ಪ್ರಗತಿಯಲ್ಲಿದೆ. ಉತ್ಖನನವೂ ನಡೆಯುತ್ತಿದೆ. ಮತ್ತೊಂದೆಡೆ, ಈ ಪ್ರಕರಣ ರಾಜಕೀಯದ ಸ್ವರೂಪವನ್ನು ಪಡೆದುಕೊಂಡಿದೆ. ಜೊತೆಗೆ ಇದೊಂದು ಷಡ್ಯಂತ್ರ ಎಂದು ಕೆಲವು ನಾಯಕರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಈ ಷಡ್ಯಂತ್ರದ ಹಿಂದೆ ಮಾಜಿ ಡಿಸಿ ಸಸಿ ಕಾನ್ಸೆಲ್ ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟಿದ್ದೇನೆ (Dharmasthala Mass Burial ) ಎಂದು ಬಂದಿರುವ ಅನಾಮಿಕ ವ್ಯಕ್ತಿಯ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ (Sasikanth Senthil) ಇದ್ದಾರೆ ಎಂದು ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ (Yashpal Suvarna) ಹೊಸ ಬಾಂಬ್‌ ಸಿಡಿಸಿದ್ದಾರೆ.

ಅಲ್ಲದೆ ಷಡ್ಯಂತ್ರ ಮಾಡಿದವರ ಮೂಲ ಹುಡುಕಬೇಕು

ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಈ ರೀತಿ ಷಡ್ಯಂತ್ರ ಮಾಡುತ್ತಿರುವವರ ಮೂಲವನ್ನ ನಾವು ಹುಡುಕಬೇಕು. ಅವರ ಮೂಲಕ್ಕೆ ಹೋದಾಗ ಎಲ್ಲವೂ ಗೊತ್ತಾಗುತ್ತದೆ. ಇದರ ಹಿಂದೆ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರನ್ನು ತನಿಖೆ ಮಾಡಿದರೆ ಎಲ್ಲಾ ಸತ್ಯ ಸಂಗತಿ ಬಯಲಿಗೆ ಬರಲಿದೆ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

AP: ಆಂಧ್ರದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ತಿರುಮಲಕ್ಕೆ ಇದು ಅನ್ವಯ ಇಲ್ಲ ಎಂದ ನಾಯ್ಡು ಸರ್ಕಾರ