AP: ಆಂಧ್ರದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ತಿರುಮಲಕ್ಕೆ ಇದು ಅನ್ವಯ ಇಲ್ಲ ಎಂದ ನಾಯ್ಡು ಸರ್ಕಾರ

Share the Article

AP: ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸುತ್ತಿದ್ದಂತೆ ತೆಲಂಗಾಣ ಸರ್ಕಾರವು ಕೂಡ ಇದನ್ನು ಅಳವಡಿಸಿಕೊಂಡಿತು. ಇದೀಗ ಆಂಧ್ರಪ್ರದೇಶದಲ್ಲಿಯೂ ಚಂದ್ರಬಾಬು ನಾಯ್ಡು ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದೆ. ಆದರೆ ಸರ್ಕಾರವು ತಿರುಮಲಕ್ಕೆ ಹೋಗುವ ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ ಎಂದು ಘೋಷಿಸಿದೆ.

ಹೌದು, ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಇತ್ತೀಚೆಗೆ ಆರಂಭವಾದ ಉಚಿತ ಬಸ್ ಯೋಜನೆ ತಿರುಮಲಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ತಿರುಪತಿಯಿಂದ ತಿರುಮಲಕ್ಕೆ ಹೋಗುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ಯೋಜನೆ ಜಾರಿಯಾಗುವುದಿಲ್ಲ ಎಂದು ತಿರುಮಲ ಡಿಪೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ತಿರುಮಲಕ್ಕೆ ಹೋಗಬೇಕೆಂದರೆ ಟಿಕೆಟ್ ಖರೀದಿಸಲೇಬೇಕು. ಈ ನಿರ್ಧಾರದ ಹಿಂದೆ ಕೆಲವು ವಿಶೇಷ ಕಾರಣಗಳಿವೆ ಎಂದು ಆರ್‌ಟಿಸಿ ತಿಳಿಸಿದೆ. ಇದರಿಂದ ತಿರುಮಲಕ್ಕೆ ಹೋಗಲು ಬಯಸಿದ್ದ ರಾಜ್ಯದ ಮಹಿಳೆಯರಿಗೆ ನಿರಾಸೆ ಉಂಟಾಗಿದೆ.

Comments are closed.