Parliament : ಇನ್ನು ಮುಂದೆ ಸಣ್ಣ ಪುಟ್ಟ ತಪ್ಪು ಮಾಡಿದವರಿಗೆ ಇಲ್ಲ ಜೈಲು ಶಿಕ್ಷೆ – ಮಸೂದೆ ತಿದ್ದುಪಡೆಗೆ ಕೇಂದ್ರ ಸಿದ್ಧತೆ

Parliament : ಇನ್ನು ಮುಂದೆ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವಂತಹ ಅಪರಾಧಿಗಳಿಗೆ ಜೈಲು ಶಿಕ್ಷೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಸೂದೆ ಒಂದಕ್ಕೆ ತಿದ್ದುಪಡಿ ನಡೆಸಲು ಸಿದ್ಧತೆ ನಡೆಸಿದೆ.

ಹೌದು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ (Piyush goyal) ಲೋಕಸಭೆಯಲ್ಲಿ (Lok sabha) ಮಹತ್ವದ ಮಸೂದೆ ಮಂಡಿಸಲು (Bill amendment) ಮುಂದಾಗಿದ್ದು,ಇದೇ ಸೋಮವಾರ (ಆ.18) ರಂದು ಜೀವನ ನಿರ್ವಹಣೆ & ವ್ಯವಹಾರಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಸೂದೆಯ ಮಂಡನೆಗೆ ಮುಂದಾಗಿದ್ದು,ಸಣ್ಣ ಪ್ರಮಾಣದ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸುವಂತೆ ಮಾಡುವ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿದೆ.
ಕಲಾಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ‘ಜೀವನ ಮತ್ತು ವ್ಯವಹಾರಗಳನ್ನು ಸುಗಮಗೊಳಿಸುವುದಕ್ಕಾಗಿ, ಆಡಳಿತದಲ್ಲಿ ವಿಶ್ವಾಸ ವೃದ್ಧಿಸುವ ಸಲುವಾಗಿ ಸಣ್ಣ ಪ್ರಮಾಣದ ತಪ್ಪುಗಳನ್ನು ಅಪರಾಧ ಮುಕ್ತಗೊಳಿಸಲು ಹಾಗೂ ತರ್ಕಬದ್ಧಗೊಳಿಸಲು ಕಾನೂನಿನಲ್ಲಿ ಕೆಲವು ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಚಿವರು ಮಂಡಿಸಲಿದ್ದಾರೆ’ ಎನ್ನಲಾಗಿದೆ. ಸುಮಾರು 350ಕ್ಕೂ ಹೆಚ್ಚು ನಿಬಂಧನೆಗಳಿಗೆ ತಿದ್ದುಪಡಿ ಮಾಡುವುದನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸುಧಾರಿಸುವುದು ಈ ಮಸೂದೆಯ ಉದ್ದೇಶ ಎನ್ನಲಾಗಿದೆ.
ಇನ್ನು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ದೇಶದಲ್ಲಿ ಕಾನೂನುಗಳಿವೆ, ಅವು ಆಶ್ಚರ್ಯಕರವೆನಿಸಬಹುದು, ಆದರೆ ಸಣ್ಣ ವಿಷಯಗಳಿಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಯಾರೂ ಅವುಗಳತ್ತ ಗಮನ ಹರಿಸಲಿಲ್ಲ’ ಎಂದು ಹೇಳಿದ್ದು ಗಮನಾರ್ಹ. ‘ಭಾರತೀಯ ನಾಗರಿಕರನ್ನು ಜೈಲಿಗೆ ಹಾಕುವ ಅಂತಹ ಅನಗತ್ಯ ಕಾನೂನುಗಳನ್ನು ರದ್ದುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ಉಪಕ್ರಮವನ್ನು ತೆಗೆದುಕೊಂಡಿದ್ದೇನೆ. ನಾವು ಈ ಹಿಂದೆ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದ್ದೆವು; ಈ ಬಾರಿ ನಾವು ಅದನ್ನು ಮತ್ತೆ ತಂದಿದ್ದೇವೆ.’
ಸರ್ಕಾರವು ಈ ಹಿಂದೆ 40,000 ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ರದ್ದುಗೊಳಿಸಿದೆ (ನಿಯಮಗಳು, ಕಾನೂನುಗಳು ಅಥವಾ ನಿಗದಿತ ಕಾರ್ಯವಿಧಾನಗಳನ್ನು ಅನುಸರಿಸಿ). ಅಲ್ಲದೆ, 1,500 ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನುಗಳನ್ನು ಸಹ ರದ್ದುಗೊಳಿಸಲಾಗಿದೆ. ‘ನಾವು ಸಂಸತ್ತಿನಲ್ಲಿ ಡಜನ್ಗಟ್ಟಲೆ ಕಾನೂನುಗಳನ್ನು ಸರಳೀಕರಿಸಲು ತಿದ್ದುಪಡಿ ಮಾಡಿದ್ದೇವೆ ಮತ್ತು ಯಾವಾಗಲೂ ಸಾರ್ವಜನಿಕ ಹಿತಾಸಕ್ತಿಯನ್ನು ಅತ್ಯಂತ ಪ್ರಮುಖವಾಗಿರಿಸಿಕೊಂಡಿದ್ದೇವೆ’ ಎಂದು ಮೋದಿ ಹೇಳಿದರು.
Mysore Dasara: ಅನನ್ಯ ಸಾಮರ್ಥ್ಯದ ಅಭಿಮನ್ಯು ತಾಲೀಮು – ಅಭಿಮನ್ಯು ಮುಂದಾಳತ್ವದಲ್ಲಿ ಲೆಫ್ಟ್ ರೈಟ್ ಹೊರಟ ಗಜಪಡೆ
Comments are closed.