Sullia: ಸುಳ್ಯದ ವ್ಯಕ್ತಿಗೆ ಕೇರಳ ರಾಜ್ಯ ಲಾಟರಿಯಲ್ಲಿ ಒಲಿದ ಒಂದು ಕೋಟಿ!

Sullia: ಅದೃಷ್ಟ ಅಂದರೆ ಇದೇ ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆಯನ್ನು ನಾವು ಕಾಣಬಹುದಾಗಿದೆ.

ಸುಳ್ಯ ತಾಲೂಕಿನ ಉಬರಡ್ಕದ ವಿನಯ್ ಕೆಟರಿಂಗ್ ನಡೆಸುತ್ತಿರುವ ವಿನಯ್ ಯಾವಟೆ ಅವರಿಗೆ ಇಂದು (ಆ.16) ನಡೆದ ಕೇರಳ ರಾಜ್ಯ ಲಾಟರಿ ಡ್ರಾದಲ್ಲಿ ಅವರು ಖರೀದಿಸಿದ KZ445643 ಸಂಖ್ಯೆಗೆ ಒಂದು ಕೋಟಿ ರೂ. ಒಲಿದಿದೆ.
ಸ್ವತಃ ಈ ವಿಷಯವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಕೆಟರಿಂಗ್ ಕೆಲಸಕ್ಕಾಗಿ ಕೇರಳಕ್ಕೆ ಹೋಗಿದ್ದಾಗ ಲಾಟರಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.
Comments are closed.