Railway: ನಿಮಗೆ ಗೊತ್ತಾ? ಭಾರತದ ಈ ಜಿಲ್ಲೆಯಲ್ಲಿದೆ ಎರಡು ದೇಶದ ರೈಲ್ವೆ ನಿಲ್ದಾಣ !!

Share the Article

Railway : ಇಂದು ಭಾರತೀಯ ರೈಲ್ವೆ ಅತ್ಯಂತ ವಿಸ್ತಾರವಾಗಿ ಹಬ್ಬಿಕೊಂಡಿದೆ. ಇದು ಪ್ರಯಾಣಿಕರ ಜೀವನಾಡಿ ಎಂದರೆ ತಪ್ಪಾಗಲಾರದು. ಅಲ್ಲದೆ ಭಾರತದ ಪ್ರತಿಯೊಂದು ಮೂಲೆಯಲ್ಲೂ ರೈಲ್ವೆ ನಿಲ್ದಾಣಗಳಿವೆ, ಅಲ್ಲಿಂದ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸುಲಭವಾಗಿ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ ಭಾರತದ ಈ ಒಂದು ಜಿಲ್ಲೆಯಲ್ಲಿ ಎರಡು ದೇಶಗಳ ರೈಲ್ವೆ ನಿಲ್ದಾಣಗಳು ಇದೆ ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಬಿಹಾರದ ಮಧುಬನಿ ಜಿಲ್ಲೆಯ ಒಂದು ರೈಲು ನಿಲ್ದಾಣ ತುಂಬಾ ವಿಶೇಷವಾದುದು. ಕಾರಣ ಅದು ಭಾರತಕ್ಕೆ ಮಾತ್ರವಲ್ಲದೆ ನೆರೆಯ ರಾಷ್ಟ್ರವಾದ ನೇಪಾಳಕ್ಕೂ ನೇರವಾಗಿ ಸಂಪರ್ಕ ಹೊಂದಿದೆ.
ಭಾರತದ ಕೊನೆಯ ರೈಲು ನಿಲ್ದಾಣ ಮಧುಬನಿ ಜಿಲ್ಲೆಯ ಜಯನಗರದಲ್ಲಿದೆ. ನೇಪಾಳದ ಗಡಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ನೇಪಾಳದ ರೈಲು ನಿಲ್ದಾಣವನ್ನ ಸಹ ಇಲ್ಲಿ ನಿರ್ಮಿಸಲಾಗಿದ್ದು, ಎರಡನ್ನೂ ಸಂಪರ್ಕಿಸಲು ವಿಶೇಷ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ.

ಇನ್ನು ಜಯನಗರ ರೈಲು ನಿಲ್ದಾಣವನ್ನು ಭಾರತದಿಂದ ಕೊನೆಯ ನಿಲ್ದಾಣವೆಂದು ಪರಿಗಣಿಸಲಾಗಿದೆ. ಇದರ ನಂತರ, ಗಡಿ ದಾಟಿದ ನಂತರ ನೇಪಾಳದ ರೈಲು ನಿಲ್ದಾಣ ಕಂಡುಬರುತ್ತದೆ. ಪ್ರಯಾಣಿಕರು ಮತ್ತು ರೈಲ್ವೆ ಜಾಲ ಎರಡರಲ್ಲೂ ಈ ಸ್ಥಳವು ಬಹಳ ವಿಶೇಷವೆಂದು ಪರಿಗಣಿಸಲ್ಪಟ್ಟಿರುವುದೇ ಇದಕ್ಕೆ ಕಾರಣ.

Comments are closed.