Home News Udupi: ಇಂಟರ್ನ್ಶಿಪ್ ಗೆ ಭಾರತಕ್ಕೆ ಬಂದು ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲ ಕಟ್ಟಿಕೊಟ್ಟ ವಿದೇಶ ವಿದ್ಯಾರ್ಥಿಗಳು!!

Udupi: ಇಂಟರ್ನ್ಶಿಪ್ ಗೆ ಭಾರತಕ್ಕೆ ಬಂದು ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲ ಕಟ್ಟಿಕೊಟ್ಟ ವಿದೇಶ ವಿದ್ಯಾರ್ಥಿಗಳು!!

Hindu neighbor gifts plot of land

Hindu neighbour gifts land to Muslim journalist

Udupi: ಸದ್ಯ ವಿದೇಶಿಗರು ಭಾರತೀಯರ ಸಂಸ್ಕೃತಿ, ಸಂಪ್ರದಾಯಗಳಿಗೆ ಮಾರುಹೋಗುತ್ತಿದ್ದಾರೆ. ಜೊತೆಗೆ ಭಾರತೀಯರ ಕಷ್ಟ ಸುಖಗಳಿಗೆ ಕೂಡ ತಾವು ನೆರವಾಗುತ್ತಿದ್ದಾರೆ. ಅಂತಿಯೇ ಇದೀಗ ವಿದೇಶಿ ವಿದ್ಯಾರ್ಥಿಗಳ ಗುಂಪೊಂದು ಇಂಟರ್ನ್ಶಿಪ್ ಗೆ ಎಂದು ಭಾರತಕ್ಕೆ ಬಂದು ಉಡುಪಿಯ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿಕೊಟ್ಟ ಘಟನೆ ನಡೆದಿದೆ.

ಹೌದು, ವಿದೇಶಿಗರು ಇಂಟರ್ನ್‌ಶಿಪ್‌ಗೆಂದು ಉಡುಪಿಯ ಬೈಂದೂರು ವಲಯದ ಕನ್ಯಾನ ಗ್ರಾಮದ ಕೂಡ್ಲು (Kudlu of Kanyana village in Byndoor zone of Udupi) ಸರಕಾರಿ ಶಾಲೆಗೆ ಬಂದಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವ ಮೂಲಕ ಎರಡು ತಿಂಗಳುಗಳ ಕಾಲ ಇಲ್ಲಿ ಕಳೆದಿದ್ದಾರೆ. ಕೊನೆಗೆ ಇಲ್ಲಿಂದ ತೆರಳುವಾಗ ಶಾಲಾ ಮಕ್ಕಳಿಗೆ ಅಗತ್ಯವಾಗಿರುವ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು elkaani ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಇವರು ದೂರದ ಊರಿನಿಂದ ಇಂಟರ್ನ್‌ಶಿಪ್‌ಗಾಗಿ ನಮ್ಮ ಊರಿಗೆ ಬಂದವರು. ಸುಮಾರು ಎರಡು ತಿಂಗಳುಗಳ ಕಾಲ ಬೈಂದೂರು ವಲಯದ ಗ್ರಾಮೀಣ ಪ್ರದೇಶದ ಹಳ್ಳಿಗಾಡಿನ ಕನ್ಯಾನ ಗ್ರಾಮದ ಕೂಡ್ಲು ಸರಕಾರಿ ಶಾಲಾವಿದ್ಯಾರ್ಥಿಗಳ ಜೊತೆ ಆಟಪಾಠದಲ್ಲಿ ಭಾಗಿಯಾದ ಅವರು ಕೊನೆಯಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ಸ್ಪಂದಿಸಿದ್ದಾರೆ. ಇವರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

https://www.instagram.com/reel/DNS13ZdyUFP/?igsh=cG12cjNvNHlreHgy

Gandhiji: ಮೊದಲ ಸ್ವಾತಂತ್ರ್ಯೋತ್ಸವಕ್ಕೆ ನೆಹರು ಕರೆದರೂ ಬರೆದ ಗಾಂಧೀಜಿ – ಹಾಗಿದ್ರೆ 1947ರ ಆಗಸ್ಟ್ 15ರಂದು “ಗಾಂಧೀಜಿ” ಎಲ್ಲಿದ್ದರು ಗೊತ್ತಾ..?