Dharmasthala Case: ಧರ್ಮಸ್ಥಳದಲ್ಲಿ ಎಸ್ಐಟಿ ಕಾರ್ಯಾಚರಣೆ ಕಾನೂನು ಪ್ರಕ್ರಿಯೆ – ಬಿಜೆಪಿ ರಾಜಕಾರಣ ಸರಿಯಲ್ಲ – ಸಚಿವ ಬೋಸ್ ರಾಜ್

Share the Article

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ಎಸ್.ಐ.ಟಿ. ತಂಡ ಅಸ್ಥಿಪಂಜರ ಪತ್ತೆ ಕಾರ್ಯನಡೆಸುತ್ತಿರುವುದು ಸಂಪೂರ್ಣವಾಗಿ ಕಾನೂನಿನ ಪ್ರಕ್ರಿಯೆ ಆಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಬೋಸ್ ರಾಜುರವರು ಸ್ಪಷ್ಟಪಡಿಸಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ 79 ನೇ ಸ್ವಾತಂತ್ರ್ಯ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ರಾಜಕಾರಣವನ್ನು ಖಂಡಿಸಿದ್ದಾರೆ. ವ್ಯಕ್ತಿಯೊಬ್ಬ ಧರ್ಮಸ್ಥಳದ ಹಲವು ಭಾಗಗಳಲ್ಲಿ ಅಪರಿಚಿತ ಶವಗಳನ್ನು ಹೂತು ಹಾಕಿದ್ದು, ಅದನ್ನು ತನಿಖೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಅಫಿಡವಟ್ ಸಲ್ಲಿಸಿದ ಹಿನ್ನಲೆಯಲ್ಲಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗಿದೆ.

ಇದನ್ನು ಬಿಜೆಪಿ ಯವರು ರಾಜಕೀಕರಣಗೊಳಿಸಲು ಯತ್ನಿಸುತ್ತಿದ್ದಾರೆ. ಯಾವುದೇ ಸರ್ಕಾರವಿದ್ದರೂ ನ್ಯಾಯಾಲಯದ ಅಣತಿಯಂತೆ ನಡೆಯಬೇಕಾಗುತ್ತದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ಅವರು ಸಹ ಎಸ್.ಐ.ಟಿ. ರಚನೆ ಮಾಡುತ್ತಿದ್ದರು. ಜನರ ದಿಕ್ಕು ತಪ್ಪಿಸುವ ಬದಲಿಗೆ ವಿರೋಧ ಪಕ್ಷಗಳು ಅಭಿವೃದ್ಧಿಯ ಬಗ್ಗೆ ಟೀಕೆ ಮಾಡಲಿ ಎಂದು ಪ್ರತಿಪಕ್ಷಗಳಿಗೆ ಸಚಿವ ಬೋಸ್ ರಾಜ್ ಸಲಹೆ ನೀಡಿದ್ದಾರೆ.

Independence Day: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸದ ರಾಹುಲ್ ಗಾಂಧಿ – ಕಾಂಗ್ರೆಸ್‌ ಅಧ್ಯಕ್ಷ ಖರ್ಗೆಯೂ ಗೈರು

Comments are closed.