Darshan : ನಟ ದರ್ಶನ್ ಗೆ ಕೈದಿ ಸಂಖ್ಯೆ ನೀಡಿದ ಜೈಲಾಧಿಕಾರಿಗಳು !!

Darshan : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಇಂದು ಪರಪ್ಪನ ಅಗ್ರಹಾರದಲ್ಲಿ ಜೈಲಿನ ಜೈಲಾಧಿಕಾರಿಗಳು ಖೈದಿ ನಂಬರ್ ನೀಡಿದ್ದಾರೆ.

ಹೌದು, ದರ್ಶನ್ ಸೇರಿ ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ. ದರ್ಶನ್ ಕೈದಿ ಸಂಖ್ಯೆ 7314, ಪ್ರದೋಷ್ 7317, ನಾಗರಾಜ್ 7315, ಲಕ್ಷ್ಮಣ 7316, ಪವಿತ್ರ ಗೌಡ,7313 ನಂಬರ್ ನೀಡಲಾಗಿದೆ. ಪವಿತ್ರಾ ಗೌಡ ಪ್ರಕರಣದ ಎ1 ಆರೋಪಿ. ಈ ಕಾರಣದಿಂದಲೇ ಪವಿತ್ರಾಗೆ ಮೊದಲ ಸಂಖ್ಯೆ ನೀಡಲಾಗಿದೆ. ನಂತರದ ಸಂಖ್ಯೆಯನ್ನು ದರ್ಶನ್ಗೆ ಕೊಡಲಾಗಿದೆ.
ಕಳೆದ ಬಾರಿ ದರ್ಶನ್ ಅವರು ಬಂಧನಕ್ಕೆ ಒಳಗಾಗಾದ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿತ್ತು. ಅನೇಕ ಅಭಿಮಾನಿಗಳು ಆಗ ಈ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು.
Darshan: ಜೈಲಿಗೆ ಹೋಗುತ್ತಿದ್ದಂತೆ ನಟ ದರ್ಶನ್ ಗೆ ಮತ್ತೆ ಕಾಣಿಸಿಕೊಂಡ ಬೆನ್ನು ನೋವು!!
Comments are closed.