Mangaluru : ಧರ್ಮಸ್ಥಳ ಪ್ರಕರಣ – ದ. ಕ ಜಿಲ್ಲಾ ಪೊಲೀಸ್ ಕಮಿಷನರ್ ಗೆ ಪತ್ರ ಬರೆದ ರಾಜ್ಯ ಮಹಿಳಾ ಆಯೋಗ!!

Share the Article

Mangaluru : ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟಿರುವ ಪ್ರಕರಣ ತನಿಖೆ ಇದೀಗ ಅಂತಿಮ ಹಂತದಲ್ಲಿದೆ. ಇದರ ನಡುವೆಯೇ ರಾಜ್ಯ ಮಹಿಳಾ ಆಯೋಗ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಮಿಷನರ್ ಗೆ ಪತ್ರವನ್ನು ಬರೆದಿದೆ.

ಈ ಹಿಂದೆ ನೂರಾರು ಶವ ಹೂತಿರುವ ಆರೋಪಗಳ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿ ಕೇಳಿ ಬಂದ ಹಿನ್ನೆಲೆ ಈ ಸಂಬಂಧ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೂ ಮಹಿಳಾ ಆಯೋಗ ಪತ್ರ ಬರೆದಿತ್ತು. ಅಂತೆಯೇ ಇದೀಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಈ ಸಂಬಂಧ ಪತ್ರ ಬರೆದು ಕೆಲವು ಮಾಹಿತಿಗಳನ್ನು ಕೇಳಿದ್ದಾರೆ.

ಪತ್ರದಲ್ಲಿ ಧರ್ಮಸ್ಥಳ ಭಾಗದಲ್ಲಿ ನಾಪತ್ತೆಯಾಗಿರುವ ಹಾಗೂ ಅಸಹಜ ಸಾವುಗಳಿಗೆ ತುತ್ತಾಗಿರುವ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳು ಹಾಗೂ ಮಹಿಳೆಯರ ವಿವರ ಕೇಳಿ ಪತ್ರ ಬರೆಯಲಾಗಿದೆ. 1990 ರಿಂದ ಇಲ್ಲಿಯವರೆಗಿನ ಮಾಹಿತಿಯನ್ನು ರಾಜ್ಯ ಮಹಿಳಾ ಆಯೋಗ ಕೇಳಿದೆ. ಈ ಹಿಂದೆಯೂ ಈ ಬಗ್ಗೆ ವಿವರ ಕೇಳಿ ಪತ್ರ ಬರೆದಾಗ ಪೊಲೀಸ್ ಇಲಾಖೆ, 2005ರಿಂದ ಮಾತ್ರ ಮಾಹಿತಿ ನೀಡಿತ್ತು. ಈ ನಿಟ್ಟಿನಲ್ಲಿ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿರುವ ಮಹಿಳಾ ಆಯೋಗ 1990 ರಿಂದ 2005 ರ ವರೆಗಿನ ವಿವರಗಳನ್ನು ಒದಗಿಸುವಂತೆ ಸೂಚಿಸಿದೆ.

Comments are closed.