Bengaluru: ಸಾರ್ಲ ಪಟ್ಟದ ಮಾಯೆ ಸ್ವಾಮಿ ಶ್ರೀ ಕೊರಗಜ್ಜ ಚಲನಚಿತ್ರದ ನಿರ್ಮಾಪಕರಿಂದ ಶ್ರೀ ಕ್ಷೇತ್ರ ಕುತ್ತಾರು ಹಾಗೂ ಧರ್ಮಸ್ಥಳಕ್ಕೆ ಭೇಟಿ!

Share the Article

Bengaluru: ಸಾರ್ಲ ಪಟ್ಟದ ಮಾಯೆ ಸ್ವಾಮಿ ಶ್ರೀ ಕೊರಗಜ್ಜ ಚಲನಚಿತ್ರದ ನಿರ್ಮಾಪಕರಾದ ಬೆಂಗಳೂರಿನ ಉದ್ಯಮಿ ವಿಜಯ್ ಕುಮಾರ್ ಮತ್ತವರ ಬಳಗ ಇದೇ ಬರುವ ಆಗಸ್ಟ್ 16ರಂದು ಶ್ರೀ ಕ್ಷೇತ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೈವ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಕುತ್ತಾರು ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ.

ಬೆಂಗಳೂರಿನ ಖ್ಯಾತ ಉದ್ಯಮಿ ವಿಜಯ್ ಕುಮಾರ್ ನಿರ್ಮಾಣದ ಹಿರಣ್ಮಯಿ ಪ್ರೊಡಕ್ಷನ್ ಲಾಂಛನದಡಿಯಲ್ಲಿ ಸಾರ್ಲ ಪಟ್ಟದ ಮಾಯೆ ಸ್ವಾಮಿ ಶ್ರೀ ಕೊರಗಜ್ಜ ಎಂಬ ಚಲನಚಿತ್ರ ವು ನಿರ್ಮಾಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಉಪನ್ಯಾಸಕರೂ, ಸಾಹಿತಿಗಳೂ,ಸಂಶೋಧಕರೂ ಆಗಿರುವ ಬಿ.ಎ.ಲೋಕಯ್ಯ ಶಿಶಿಲರ ಕಥೆ, ಚಿತ್ರಕಥೆ, ಸಂಭಾಷಣೆ ಇರುವ ಈ ಚಲನ ಚಿತ್ರವು, ಚಿತ್ರನಟ ಆನಂದ್ ಎರ್ಮಾಳ್ ರ ನಿರ್ದೇಶನ ಹಾಗೂ ಚಿತ್ರ ನಟ ಅಲೋಕ್ ದುರ್ಗಾಪ್ರಸಾದ್ ರ ಸಹನಿರ್ದೇಶನ, ಧೀರಜ್ ಸನಿಲ್ ರ ಆರ್ಟ್ ಡೈರೆಕ್ಷನ್ ನಲ್ಲಿಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಾಗಲಿದೆ. ಚಲನಚಿತ್ರ ನಿರ್ಮಾಣಕ್ಕೆ ಮೊದಲು ಶ್ರೀ ಕ್ಷೇತ್ರ ಕುತ್ತಾರು ಕೊರಗಜ್ಜ ಸನ್ನಿಧಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೈವ ದೇವ ದೇವರಿಗೆ ವಿಶೇಷ ಪೂಜೆ ಸಲ್ಲಿಸಬೇಕೆಂಬ ಚಲನಚಿತ್ರ ನಿರ್ಮಾಪಕರಾದ ವಿಜಯಕುಮಾರ್ ರ ಇಚ್ಛೆಯಂತೆ ಅವರು ತಮ್ಮ ಬಳಗದೊಂದಿಗೆ ಶ್ರೀ ಕ್ಷೇತ್ರ ಗಳನ್ನು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ ಈ ವೇಳೆ ಅವರ ಜೊತೆ ಚಿತ್ರತಂಡ ವೂ ಇರಲಿದೆ.

Pavithra gowda arrest: ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ1 ಆರೋಪಿ ಪವಿತ್ರಾ ಗೌಡ ಬಂಧನ!

Comments are closed.