Dharmasthala: ಅಂಬಾಸಿಡರ್ ಕಾರು ಬರುತ್ತಿತ್ತು, ಡಿಕ್ಕಿಯಿಂದ ಹೆಣ ತೆಗೆದು ಹೂಳುತ್ತಿದ್ದರು, ನಾನು ಕಣ್ಣಾರೆ ಕಂಡೆ – ಹೊಸ ದೂರುದಾರನ ಸ್ಫೋಟಕ ಹೇಳಿಕೆ.!

Dharmasthala : ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ 13 ಸ್ಥಳಗಳು ಹಾಗೂ ಇತರೆಡೆಯೂ ಎಸ್‌ಐಟಿ ತಂಡ ಅಗೆದು ಶವ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗಲೇ, ಬೆಳ್ತಂಗಡಿ ಎಸ್‌ಐಟಿ ಕಚೇರಿಯ ಮುಂದೆ ಪುರಂದರ ಗೌಡ ಹಾಗೂ ತುಕಾರಾಮ್ ಗೌಡ ಎಂಬುವವರು ಇಬ್ಬರು, ಶವ ಹೂತಿರುವುದನ್ನು ನೋಡಿದ್ದಾಗಿ ದೂರು ಕೊಟ್ಟಿದ್ದಾರೆ.

ಆಗಸ್ಟ್ 6 ರಂದು ದೂರು ಕೊಡಲು ಬಂದಿದ್ದಾಗ, ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲು ಎಸ್ ಐಟಿ ಅಧಿಕಾರಿಗಳು ಹೇಳಿದ್ದರು. ನಂತರ ಆಗಸ್ಟ್ 8ಕ್ಕೆ ದೂರು ಕೊಟ್ಟರೂ ತನಿಖೆಗೆ ಕರೆದಿಲ್ಲ ಎಂಬ ಕಾರಣಕ್ಕೆ ಅವರೇ ಬಂದು ಎಸ್ ಐಟಿ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಬಳಿ ಮಾತನಾಡಿದ, ಕೊಲೆಯಾದ ಸೌಜನ್ಯಳ ಮಾವನೂ ಆಗಿರುವ ಪುರಂದರ ಗೌಡ, ನಾನೂ ಕೂಡಾ ದೂರುದಾರ ತೋರಿಸಿದ 13 ನೇ ಸ್ಥಳ ಹಾಗೂ 1 ನೇ ಸ್ಥಳದಲ್ಲಿ ಹೆಣ ಹೂತಿರುವುದನ್ನು ನೋಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.
ಈ ಕುರಿತಾಗಿ ಮಾತನಾಡಿ, ನಾವು ಎರಡು-ಮೂರು ಶವಗಳನ್ನ ಹೂತು ಹಾಕಿರುವುದನ್ನ ನೋಡಿದ್ದೇವೆ. ಆದರೆ ಅವರ ಪರಿಚಯ ನಮಗೆ ಇಲ್ಲ. ನಾವು ಈಗ ಗುರುತು ಮಾಡಿರುವ ಸ್ಥಳದಲ್ಲಿ ಶವ ಹೂತು ಹಾಕಿರುವುದ್ನ ನೋಡಿಲ್ಲ. ಅದೇ ಬೇರೆ ಜಾಗ. ಎಸ್ ಐ ಟಿ ಅಧಿಕಾರಿಗಳು ಕೇಳಿದರೆ ನಾವು ಶವ ಹೂತು ಹಾಕಿರುವ ಸ್ಥಳವನ್ನ ತೋರಿಸಬೇಕು ಎಂದು ಕೇಳಿದರೆ ನಾವು ತೋರಿಸಲು ಸಿದ್ದರಿದ್ದೇವೆ. ನಾನು ಆ ಜಾಗದಲ್ಲಿ ಒಂದು ಬಾರಿ ಮಾತ್ರ ಹೆಣವನ್ನ ಹೂಳುವುದನ್ನ ನೋಡಿದ್ದೇನೆ. ಆದರೆ ಎಷ್ಟು ಶವ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತುಕರಾಂ ಹೇಳಿದ್ದಾನೆ.
ಅಲ್ಲದೆ ದುಷ್ಕರ್ಮಿಗಳು ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣ ತೆಗೆದು ಸಂಜೆ 4-5 ಗಂಟೆಯ ಕದ್ದುಮುಚ್ಚಿ ಹೆಣ ಹೂತುಹಾಕಿದ್ದನ್ನು ನಾನು ನೋಡಿದ್ದೇನೆ. ಭಯದಿಂದ ಇಲ್ಲಿಯವರೆಗೆ ಯಾರಿಗೂ ಹೇಳಿರಲಿಲ್ಲ.. ಈಗ ಎಸ್ ಐ ಟಿ ರಚನೆಯಾಗಿದ್ದಕ್ಕೆ ಧೈರ್ಯದಿಂದ ಮುಂದೆ ಬಂದಿದ್ದೇವೆ ಎಂದು ಪುರಂದರ ಗೌಡ ತಿಳಿಸಿದ್ದಾನೆ.
Comments are closed.