Home News SBI ಗ್ರಾಹಕರಿಗೆ ಶಾಕ್ – ಇನ್ಮುಂದೆ ಈ ಸೇವೆಗೆ ಶುಲ್ಕ ಅನ್ವಯ

SBI ಗ್ರಾಹಕರಿಗೆ ಶಾಕ್ – ಇನ್ಮುಂದೆ ಈ ಸೇವೆಗೆ ಶುಲ್ಕ ಅನ್ವಯ

Hindu neighbor gifts plot of land

Hindu neighbour gifts land to Muslim journalist

SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದ್ದು ಇಲ್ಲಿಯವರೆಗೆ ಸಂಪೂರ್ಣವಾಗಿ ಉಚಿತವಾಗಿದ್ದ ಆನ್‌ಲೈನ್ IMPS (ತತ್ಕ್ಷಣ ಹಣ ಪಾವತಿ ಸೇವೆ) ವರ್ಗಾವಣೆಯ ಮೇಲೆ ಆಗಸ್ಟ್ 15, 2025ರಿಂದ, ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿದೆ.

ಹೌದು, ನೀವು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ UPI ಮೂಲಕ IMPS ವರ್ಗಾವಣೆ ಮಾಡಿದರೆ, ಈಗ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ, ₹25,000 ವರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ₹25,001 ರಿಂದ ₹1 ಲಕ್ಷದವರೆಗೆ ₹2 + GST, ₹1 ಲಕ್ಷದಿಂದ ₹2 ಲಕ್ಷದವರೆಗೆ ₹6 + GST ಮತ್ತು ₹2 ಲಕ್ಷದಿಂದ ₹5 ಲಕ್ಷದವರೆಗೆ ₹10 + GST ವಿಧಿಸಲಾಗುತ್ತದೆ. ಮೊದಲು ಈ ಎಲ್ಲಾ ಆನ್‌ಲೈನ್ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿದ್ದವು ಆದರೆ ಈಗ ಪ್ರತಿ ಸ್ಲ್ಯಾಬ್‌’ನಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.

ಆದರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ವಿಶೇಷ ಸಂಬಳ ಪ್ಯಾಕೇಜ್ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ (DSP, CGSP, PSP, RSP, CSP, SGSP, ICGSP, SUSP ನಂತಹ) ಈ ಶುಲ್ಕ ಅನ್ವಯಿಸುವುದಿಲ್ಲ.

Supreme court : ದರ್ಶನ್‌ ಗೆ ರಾಜಾತಿಥ್ಯ ನೀಡಿದ್ದ ಜೈಲಾಧಿಕಾರಿಗಳ ಸಸ್ಪೆಂಡ್‌ಗೆ ಸುಪ್ರೀಂ ಕೋರ್ಟ್‌ ಆದೇಶ!!