Home News Independence day: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮೂರು ದಿವಸ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ!

Independence day: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮೂರು ದಿವಸ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ!

Hindu neighbor gifts plot of land

Hindu neighbour gifts land to Muslim journalist

Independence day: 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಗಸ್ಟ್ 16, 17 ಮತ್ತು 18 ರಂದು ಒಟ್ಟು ಮೂರು ದಿನಗಳು ರಾಜಭವನದ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜಭವನ ಮಾಹಿತಿ ನೀಡಿದೆ.

ಸದರಿ ಮೂರು ದಿನಗಳು ಸಂಜೆ 6 ರಿಂದ 7:30 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ರಾಜಭವನದ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಸರ್ಕಾರದಿಂದ ವಿತರಿಸಿರುವ/ಸ್ಪಷ್ಟವಾಗಿ ಭಾವಚಿತ್ರವಿರುವ ಐ.ಡಿ. ಕಾರ್ಡ್ ಅನ್ನು ಕಡ್ಡಾಯವಾಗಿ ತರುವುದು. ರಾಜಭವನದ ಪ್ರವೇಶದ ಸಂದರ್ಭದಲ್ಲಿ ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡುವುದು. ರಾಜಭವನದ ಆವರಣದೊಳಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಸ್ಥಳಗಳನ್ನು ಬಿಟ್ಟು ಬೇರೆಡೆಗೆ ಪ್ರವೇಶಿಸಬಾರದು. ಸಾರ್ವಜನಿಕರು ಪ್ರವೇಶದ ಸಂದರ್ಭದಲ್ಲಿ ಮತ್ತು ಪ್ರವೇಶಿಸಿದ ನಂತರ ಭದ್ರತೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನೀಡುವ ಸಲಹೆ/ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು.

ಸಾರ್ವಜನಿಕರು ರಾಜಭವನದ ಆವರಣದೊಳಗೆ ಶಾಂತಿ ಮತ್ತು ನಿಶ್ಯಬ್ದ ಕಾಪಾಡುವ ಮೂಲಕ ಸಹಕರಿಸುವಂತೆಯೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Mysore Dasara: ದಸರಾ ಗಜಪಡೆ ಬಲಾಡ್ಯತೆಗೆ ಬೇಕಿದೆ ಟನ್‌ಗಟ್ಟಲೆ ಆಹಾರ – ಟನ್‌ ಗಟ್ಟಲೆ ಆಹಾರ ಪೂರೈಕೆ