Private Bus: ನಾಳೆಯಿಂದ ಸಾಲು ಸಾಲು ರಜೆ – ಖಾಸಗಿ ಬಸ್ ಮಾಲಿಕರಿಗೆ ಹಬ್ಬ – ಪ್ರಯಾಣಿಕರಿಗೆ ಮಾರಿ ಹಬ್ಬ

Share the Article

Private Bus: ನಾಳೆಯಿಂದ ಸಾಲು ಸಾಲು ರಜೆ ಹಿನ್ನಲೆ ಬೆಂಗಳೂರಿನಿಂದ ಊರಿನತ್ತ ಸಾಗುವ ಜನರಿಗೆ ಮತ್ತದೇ ಶಾಕಿಂಗ್‌ ನ್ಯೂಸ್‌. ಎಂದಿನಂತೆ ಹಬ್ಬದ ಸಮಯದಲ್ಲಿ ಮತ್ತೆ ಖಾಸಗಿ ಬಸ್ ಮಾಲಿಕರು ಪ್ರಯಾಣಿಕರ ಹತ್ರ ಸುಲಿಗೆಗೆ ಇಳಿದಿದ್ದಾರೆ. ನಾಳೆ ಸ್ವಾತಂತ್ರ್ಯ ದಿನ ಹಾಗೂ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಶುಕ್ರವಾರ ರಜಾ ದಿನ ಜೊತೆಗೆ 3 ದಿನ ಸಾಲು ಸಾಲು ರಜೆ ಇದೆ.

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತಮ್ಮ ಊರಿನತ್ತ ತೆರಳ್ತಿರುವ ಜನರು, ತಮ್ಮ ತಮ್ಮ ಊರುಗಳಿಗೆ ಮುಂಚಿತವಾಗಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಪ್ರಯಾಣಿಕರು ಮುಂದಾಗಿದ್ದಾರೆ. ಆದರೆ ಇತ್ತ ರಜಾದಿನವನ್ನೇ ಬಂಡವಾಳ‌ ಮಾಡಿಕೊಂಡ ಖಾಸಗಿ ಬಸ್ ಮಾಲಿಕರು ಈಗಾಗಲೆ ದುಪ್ಪಟ್ಟು ದರ ನಿಗದಿ ಮಾಡಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ 700 ರೂ ಇದ್ದ ಟಿಕೆಟ್ ದರ ಈಗ 1200 ರೂ ಆಗಿದೆ. ಬೆಳಗಾವಿಗೆ 750 ರೂ ಇದ್ದ ಟಿಕೆಟ್ ದರ 1300ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಗೆ 900 ರೂ ಇದ್ದ ದರ ಈಗ 1500 ರೂ ಆಗಿದೆ. ಇನ್ನು ಬಳ್ಳಾರಿಗೆ 600 ರೂಪಾಯಿ ಇದ್ದ ಬಸ್ ಟಿಕೆಟ್ ದರ 1000 ರೂ ಗೆ ಏರಿ ಕುಳಿತಿದೆ. ಖಾಸಗಿ ಬಸ್ ಮಾಲಿಕರ ಈ ರೀತಿಯ ದರ ವಸೂಲಿಗೆ ಪ್ರಯಾಣಿಕರು ಸುಸ್ತಾಗಿದ್ದಾರೆ.

ಪ್ರತೀ ಹಬ್ಬಗಳು ಬಂದಾಗ ಇದೇ ಗೋಳು. ಖಾಸಗಿ ಮಾಲೀಕರಿಗೆ ಇದೇ ಹಬ್ಬ. ಬೆಂಗಳೂರಿನಿಂದ ಹೆಚ್ಚಾಗಿ ಅನೇಕರು ಹಬ್ಬಕ್ಕಾಗಿ ತಮ್ಮ ತಮ್ಮ ಊರುಗಳಿಗೆ ತೆರಳಬಾಕಾದ ಅನಿವಾರ್ಯ. ಆದರೆ ಇದೇ ಅನಿವಾರ್ಯತೆಯನ್ನು ಖಾಸಗಿ ಬಸ್‌ ಮಾಲೀಕರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.

Shilpa shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ದ 60 ಕೋಟಿ ರೂ. ವಂಚನೆ ಆರೋಪ!

Comments are closed.