Dharmasthala Case: ಧರ್ಮಸ್ಥಳ ಪ್ರಕರಣ – ಗೃಹ ಸಚಿವರನ್ನು ಭೇಟಿಯಾದ ಕರಾವಳಿಯ ಕೈ ನಾಯಕರ ನಿಯೋಗ – ಅವರ ಅಭಿಪ್ರಾಯವೇನು?

Share the Article

Dharmasthala Case: ಧರ್ಮಸ್ಥಳ ಪ್ರಕರಣ ಸಂಬಂಧ ಮಧ್ಯಂತರ ವರದಿ ನೀಡುವಂತೆ ಬಿಜೆಪಿ ಪಟ್ಟು ಹಿಡಿದಿದ್ದು, ತನ್ನದೇ ವಾದವನ್ನು ಬಿಜೆಪಿ ಮಂಡಿಸುತ್ತಿದೆ. ಎಸ್‌ಐಟಿ ತನಿಖೆಯನ್ನು ನಿಲ್ಲಿಸಬೇಕು ಅನ್ನುವಂತೆ ತನ್ನ ಅಭಿಪ್ರಾಯವನ್ನು ಬಿಜೆಪಿ ವ್ಯಕ್ತಪಡಿಸುತ್ತಿದೆ. ಅಲ್ಲದೆ ದೇವಸ್ಥಾನಕ್ಕೆ ಅಪಚಾರವಾಗುತ್ತಿದೆ. ಹಿಂದೂ ಧರ್ಮದ ಮೇಲೆ ಸವಾರಿ ಮಾಡಲಾಗುತ್ತಿದೆ ಎಂದು ತಮ್ಮ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೇ ವೇಳೆ ಕರಾವಳಿಯ ಕಾಂಗ್ರೆಸ್‌ ನಾಯಕರು ಏನಂತಿದ್ದಾರೆ ಈ ಬಗ್ಗೆ? ಅವರು ನಿನ್ನೆ ಸಿಎಂ ಹಾಗೂ ಗೃಹ ಸಚಿವರನ್ನು ಭೇಟಿಯಾಗಿದ್ದಾರೆ.

ಗೃಹ ಸಚಿವರನ್ನು ದಕ್ಷಿಣ ಕನ್ನಡದ ಕೈ ನಾಯಕರ ನಿಯೋಗ ಭೇಟಿಯಾಗಿದ್ದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಗೃಹ ಸಚಿವ ಪರಂ ಅವರನ್ನು ವಿನಯ್ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಹರೀಶ್ ಕುಮಾರ್, ರಮಾನಾಥ್ ರೈ ಭೇಟಿಯಾಗಿದ್ದಾರೆ.

ನಿನ್ನೆ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರನ್ನೂ ದಕ್ಷಿಣ ಕನ್ನಡದ ಕೈ ನಾಯಕರು ಭೇಟಿಯಾಗಿದ್ದು, ಇಂದು ಬೆಳಗ್ಗೆ ಗೃಹ ಸಚಿವರ ಜೊತೆಗೆ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಧರ್ಮಸ್ಥಳ ಪ್ರಕರಣ ಹೀಗೇ ಮುಂದುವರಿದರೆ ಉದ್ವಿಗ್ನ ಸ್ಥಿತಿಗೆ ಹೋಗಬಹುದು. ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಘಟನೆಯಲ್ಲಿ ಕಿಡಿಗೇಡಿಗಳು ಹಸ್ತಕ್ಷೇಪ ಹೆಚ್ಚಾಗುತ್ತದೆ.

ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಶುರುವಾಗಿದೆ. ಧರ್ಮಸ್ಥಳದ ವಿಚಾರದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡುವುದು ಒಳ್ಳೆಯದು ಎಂದು

ಗೃಹ ಸಚಿವರಿಗೆ ದಕ್ಷಿಣ ಕನ್ನಡದ ರಾಜಕೀಯ ವಸ್ತುಸ್ಥಿತಿಯನ್ನೂ ವಿವರವಾಗಿ ಮಾಜಿ ಶಾಸಕರು ತಿಳಿಸಿದ್ದಾರೆ.

Comments are closed.