Food: ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆ!

Share the Article

Food: ಬೇಕರಿಯಿಂದ ಖರೀದಿಸಿದ್ದ ಕರ್ರಿ ಪಪ್ಸ್‌ನಲ್ಲಿ (Curry Pups) ಹಾವು ಪತ್ತೆಯಾಗಿರುವ ಘಟನೆ ತೆಲಂಗಾಣದ (Telangana) ಮೆಹಬೂಬ್ ನಗರದಲ್ಲಿ ನಡೆದಿದೆ.

ಶ್ರೀಶೈಲ ಎಂಬ ಮಹಿಳೆ ಜಡ್ಚರ್ಲಾ ಪುರಸಭೆಯಲ್ಲಿರುವ ಅಯ್ಯಂಗಾರ್ ಬೇಕರಿಯಿಂದ ಎಗ್ ಪಪ್ಸ್ (Egg Pups) ಹಾಗೂ ಕರ‍್ರಿ ಪಪ್ಸ್ ಖರೀದಿಸಿ ತಿನ್ನಲು ಕುಳಿತ ವೇಳೆ ಕರ‍್ರಿ ಪಪ್ಸ್ ತೆರೆದಾಗ ಅದರಲ್ಲಿ ಹಾವು ಇರುವುದು ಪತ್ತೆಯಾಗಿದೆ.

ಕೂಡಲೇ ಮಹಿಳೆ ಈ ಕುರಿತು ಬೇಕರಿ ಮಾಲೀಕರಿಗೆ ಮಾಹಿತಿ ತಿಳಿಸಿದ್ದು, ಅವರು ಬೇಜವ್ದಾರಿಯಿಂದ ವರ್ತಿಸಿದ್ದಾರೆ. ಜೊತೆಗೆ ಇಲ್ಲಸಲ್ಲದ ಕಾರಣ ಹೇಳಿದರು. ಇದರಿಂದ ಕೋಪಗೊಂಡ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಈ ಕುರಿತು ಜಡ್ಚರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Street Dog: ಬೀದಿ ನಾಯಿಗಳ ನಿಯಂತ್ರಣ – ಸುಪ್ರೀಂ ಕೋರ್ಟ್ ತೀರ್ಪು ವಿಚಾರ – ಆದೇಶ ಕಾಪಿ ಬಂದ ಮೇಲೆ ಸರ್ಕಾರದ ಜೊತೆ ಚರ್ಚೆ – ಬಿಬಿಎಂಪಿ ಕಮೀಷನರ್

Comments are closed.