Home News UP: ‘ನಿನಗಿಂತ ಹೆಚ್ಚು ವಿದ್ಯಾವಂತ ನಾನು’ – ಟ್ರಾಫಿಕ್ ಜಾಮ್ ಮಾಡಿದ ಬಿಜೆಪಿ MLC ಪತ್ರನಿಗೆ...

UP: ‘ನಿನಗಿಂತ ಹೆಚ್ಚು ವಿದ್ಯಾವಂತ ನಾನು’ – ಟ್ರಾಫಿಕ್ ಜಾಮ್ ಮಾಡಿದ ಬಿಜೆಪಿ MLC ಪತ್ರನಿಗೆ ಟ್ರಾಫಿಕ್ ಪೊಲೀಸ್ ಕ್ಲಾಸ್!!

Hindu neighbor gifts plot of land

Hindu neighbour gifts land to Muslim journalist

UP: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ (Hathras) ಬಿಜೆಪಿ ಎಂಎಲ್‌ಸಿಯ ಮಗ ಮತ್ತು ಟ್ರಾಫಿಕ್ ಪೊಲೀಸ್ ನಡುವಿನ ತೀವ್ರ ಘರ್ಷಣೆ ವೈರಲ್ (Viral Video) ಆಗಿದ್ದು, ರಾಜಕೀಯ ಒತ್ತಡಕ್ಕೆ ಹೆದರದೆ ಧೈರ್ಯವಾಗಿ ಎಂಎಲ್ಸಿ ಮಗನಿಗೆ ಪೊಲೀಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಪೊಲೀಸ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಮೂಲಗಳ ಪ್ರಕಾರ ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯ ಚೌಧರಿ ರಿಷಿಪಾಲ್ ಸಿಂಗ್ ಅವರ ಮಗ ತಪೇಶ್ ತನ್ನ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು. ಈ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಕಾನ್‌ಸ್ಟೆಬಲ್ ಎಸ್‌ಪಿ ಸಿಂಗ್‌ಗೆ ಕಾರನ್ನು ತೆಗೆಯುವಂತೆ ಕೇಳಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಮೇಲೆ ಕೂಗಾಡಿದ ತಪೇಶ್ ನಾನು ಯಾರು ಗೊತ್ತಾ? ಯಾರ ಮಗ ಎಂದು ಗೊತ್ತಾ? ಮೊದಲು ತೊಲಗು ಇಲ್ಲಿಂದ ಎಂದು ಗದರಿದ್ದಾರೆ.

ಇದರಿಂದ ಕೋಪಗೊಂಡ ಪೊಲೀಸ್ ಕಾನ್ಸ್ಟೆಬಲ್ “ನೀವು ಟ್ರಾಫಿಕ್ ಜಾಮ್ ಮಾಡುತ್ತಿದ್ದೀರಿ. ಅಷ್ಟೇ ಅಲ್ಲದೆ ಪೊಲೀಸ್ ಜೊತೆಗೆ ನೀವು ಅಸಭ್ಯವಾಗಿ ವರ್ತಿಸುತ್ತಿದ್ದೀರಿ. ಸರ್ಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನೀವು ನಿಮ್ಮ ತಂದೆಯ ಹೆಸರಿಗೆ ಅವಮಾನ ತರುತ್ತಿದ್ದೀರಿ. ನಾನು ನಿಮಗಿಂತ ಎರಡು ಪಟ್ಟು ಹೆಚ್ಚು ವಿದ್ಯಾವಂತ. ಸರಿಯಾಗಿ ಮಾತನಾಡುವುದು ನನಗೆ ತಿಳಿದಿದೆ” ಎಂದು ಸಮಾಧಾನದಿಂದಲೇ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಸಂಭಾಷಣೆ ವೈರಲ್

ಟ್ರಾಫಿಕ್ ಪೊಲೀಸ್: ನನಗೆ 55 ವರ್ಷ, ನೀವು “ಇಲ್ಲಿಂದ ತೊಲಗು” ಅಂತ ಹೇಗೆ ಹೇಳ್ತೀರಿ..?

ಎಂಎಲ್‌ಸಿ ಮಗ: ನಿಮಗೆ 55 ವರ್ಷ, ಅದಕ್ಕಾಗಿಯೇ ನಾನು ಗೌರವ ತೋರಿಸುತ್ತಿದ್ದೇನೆ..

ಟ್ರಾಫಿಕ್ ಪೊಲೀಸ್: ಏನು ಗೌರವ? ನೀವು ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದ್ದೀರಿ..

ಎಂಎಲ್‌ಸಿ ಮಗ: ನೀವು ಸರಿಯಾಗಿ ಮಾತನಾಡಬೇಕು. ನೀವು ಇಲಾಖೆಯ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ. ನಾನು ನಿಮ್ಮೊಂದಿಗೆ ಚೆನ್ನಾಗಿ ಸೌಮ್ಯವಾಗಿ ಮಾತನಾಡುತ್ತಿದ್ದೇನೆ.

ಟ್ರಾಫಿಕ್ ಪೊಲೀಸ್: ನೀವು ಚೆನ್ನಾಗಿ ಮಾತನಾಡಿದ್ದರೆ, ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಈ ನಿಮ್ಮ ನಡವಳಿಕೆಯಿಂದ ನಿಮ್ಮ ತಂದೆಯ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ

ಎಂಎಲ್‌ಸಿ ಮಗ: ನೀವು ಸರ್ಕಾರದ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ..

ಟ್ರಾಫಿಕ್ ಪೊಲೀಸ್: ನಾನು ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ. ನಾನು ನಿಮಗಿಂತ ಹೆಚ್ಚು ವಿದ್ಯಾವಂತ. ನನಗೆ ಮಾತನಾಡುವುದು ಗೊತ್ತು. ನೀವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ.

ನಂತರ ಎಂಎಲ್‌ಸಿ ಮಗತಲೆಯಾಡಿಸಿ, ಏನೋ ಗೊಣಗುತ್ತಾನೆ… ಎಂದು ಹೇಳಿ ಕಾರನ್ನು ಮುಂದಕ್ಕೆ ಚಲಿಸುತ್ತಾನೆ.

Sujatha Bhat: ‘ನಾನು ಎಲ್ಲೂ ನಾಪತ್ತೆಯಾಗಿಲ್ಲ, ಎಲ್ಲಿರಬೇಕು ಅಲ್ಲಿದ್ದೇನೆ’ – ಅನನ್ಯ ಭಟ್ ತಾಯಿ ಸುಜಾತ ಭಟ್ ಸ್ಪಷ್ಟನೆ!!