Dharmasthala Case: ವಿಧಾನ ಸೌಧಕ್ಕೆ ಆಗಮಿಸಿದ್ದ ಎಸ್‌ಐಟಿ ತಂಡದ ಅಧಿಕಾರಿ – ಗೃಹಸಚಿವ, ಸಿಎಂರನ್ನು ಭೇಟಿಯಾದ ತನಿಖಾಧಿಕಾರಿ ಅನುಚೇತ್

Share the Article

Dharmasthala Case: ಧರ್ಮಸ್ಥಳ ಪ್ರಕರಣ ತನಿಖೆಯ SIT ತಂಡದಲ್ಲಿರುವ IPS ಅಧಿಕಾರಿ ಅನುಚೇತ್ ಅವರು ವಿಧಾನ ಸೌಧಕ್ಕೆ ಆಗಮಿಸಿದ್ದು, ಮಧ್ಯಾಹ್ನ 2-14ಕ್ಕೆ ಗೃಹಸಚಿವರ ಕೊಠಡಿಗೆ ತೆರಳಿದರು. ಸುಮಾರು 16ನಿಮಿಷಗಳ ಕಾಲ ಗೃಹ ಸಚಿವರ ಕೊಠಡಿಯಲ್ಲಿದ್ದ IPS ಅನುಚೇತ್ ನಂತರ ವಾಪಾಸ್‌ ತೆರಳಿದ್ದಾರೆ.

ಇದುವರೆಗಿನ SIT ತನಿಖೆಯ ಬಗ್ಗೆ ಮಾಹಿತಿ ನೀಡಿ ಎಂದು ಬಿಜೆಪಿ ಆಗ್ರಹಿಸಿದ್ದರು. ಅದಲ್ಲದೆ ಸದನದಲ್ಲಿಯೇ ಮಾಹಿತಿ ನೀಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ SITಯಿಂದ ಮಾಹಿತಿ ಪಡೆದು ಕೊಳ್ಳಲು ಮುಂದಾದ ಪರಮೇಶ್ವರ್, SIT ತಂಡದ IPS ಅಧಿಕಾರಿ ಅನುಚೇತ್‌ಗೆ ಬುಲಾವ್ ನೀಡಿ ಕರೆಸಿದ್ದರು.

ಪರಮೇಶ್ವರ್ ಕರೆಯ ಮೇರೆಗೆ ಭೇಟಿಗೆ ಬಂದಿರುವ ಅನುಚೇತ್, ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಪರಮೇಶ್ವರ್ ಕೊಠಡಿಯಲ್ಲಿಯೇ ಭೇಟಿ ಆದ ಬಳಿಕ ಅನುಚೇತ್ ಸಿಎಂ ಭೇಟಿಗೆ ತೆರಳಿದರು. SIT ತನಿಖೆಯ ಇದುವರೆಗಿನ ಮಾಹಿತಿಯ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ಅಲ್ಲದೆ ಅನುಚೇತ್ ನೀಡಿರುವ ಮಾಹಿತಿಯನ್ನ ಸಿಎಂ ಗಮನಕ್ಕೆ ಗೃಹ ಸಚಿವ ಪರಮೇಶ್ವರ್ ಕೂಡ ತರಲಿದ್ದಾರೆ ಎಂದು ಹೇಳಿದ್ದಾರೆ.

ವಿಧಾನ ಸಭೆಯಲ್ಲಿ ಇಂದು ಧರ್ಮಸ್ಥಳ SIT ತನಿಖೆ ವಿಚಾರ ಪ್ರತಿಧ್ವನಿಸಿದ್ದು, SIT ತನಿಖೆಯ ಕುರಿತಯ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಕೇಳಿತ್ತು. ತನಿಖೆಯ ಇದುವರೆಗಿನ ಪ್ರಗತಿ ಕುರಿತು ಮಾಹಿತಿ ಬಹಿರಂಗ ಪಡಿಸಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿದರು. ತನಿಖೆ ನಡೆಯುತ್ತಿದ್ದು ಚರ್ಚೆ ಹೇಗೆ ಸಾಧ್ಯ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದರು. ಈ ನಡುವೆ ವಿಧಾನ ಸೌಧಕ್ಕೆ ಆಗಮಿಸಿದ SIT ತಂಡದ IPS ಅಧಿಕಾರಿ ಅನುಚೇತ್ ಪರಮೇಶ್ವರ್‌ ಹಾಗೂ ಸಿಎಂ ಅವರನ್ನು ಭೇಟಿಯಾಗಿದ್ದಾರೆ.

Modi Gift: ಗಿಫ್ಟ್‌ ತಂದಿದ್ದು ಬಿಜೆಪಿ ಶಾಸಕನಿಗೆ ನಿರಾಸೆ – ಬೆಳ್ಳಿ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಗೆ ಕೊಟ್ಟದ್ದು ಡಿ. ಕೆ ಶಿವಕುಮಾ‌ರ್

Comments are closed.