Band: ಸಿ & ಡಿ ಕೃಷಿ ಭೂಮಿ ಹಕ್ಕಿಗಾಗಿ ಸೋಮವಾರಪೇಟೆ ಸಂಪೂರ್ಣ ಬಂದ್ – ರಸ್ತೆ ತಡೆ, ಮುತ್ತಿಗೆ

Band: ಸಿ ಮತ್ತು ಡಿ ಜಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂದುಕೊಳ್ಳುವoತೆ ಒತ್ತಾಯಿಸಿ ರೈತ ಹೋರಾಟ ಸಮಿತಿಯಿಂದ ಕರೆ ನೀಡಲಾಗಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸೋಮವಾರಪೇಟೆ ಪಟ್ಟಣ್ಣದಲ್ಲಿ ಅಂಗಡಿ ಮುಂಗಟುಗಳು ಸಂಪೂರ್ಣ ಮುಚ್ಚಲ್ಪಟ್ಟಿವೆ.

ಎಲ್ಲಾ ಖಾಸಗಿ ಬಸ್ ಮತ್ತು ಆಟೋ ಟ್ಯಾಕ್ಸಿಗಳು ರಸ್ತೆಗೆ ಇಳಿದಿಲ್ಲ. ತಾಲ್ಲೂಕು ಕೇಂದ್ರದ ವಿವೇಕಾನಂದ ವೃತ್ತದಲ್ಲಿ ಸ್ಥಳೀಯರು ರಸ್ತೆಗೆ ಮರ ಅಡ್ಡ ಇಟ್ಟು ರಸ್ತೆಯಲ್ಲೇ ಅಡುಗೆ ತಯಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಇದರಿಂದ ವಾಹನ ಸವಾರರು ಮತ್ತು ಪ್ರತಿಭಟನೆ ನಡೆಸುತ್ತಿರುವವರ ನಡುವೆ ಮಾತಿನ ಚಕಮಕಿ ನಡೆದಿದೆ.
ಶನಿವಾರಸಂತೆಯಲ್ಲಿ ರೈತ ಹೋರಾಟಗಾರರು, ಕಾಫಿ ಬೆಳೆಗಾರರ ಸಂಘ, ವರ್ತಕರ ಸಂಘ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಶನಿವಾರ ಸಂತೆ ಮತ್ತು ಕೊಡ್ಲಿಪೇಟೆಯಲ್ಲೂ ತಾಲ್ಲೂಕು ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Gold Tax: ಚಿನ್ನದ ಮೇಲೆ ಯಾವುದೇ ಸುಂಕ ಇರುವುದಿಲ್ಲ – ಡೊನಾಲ್ಡ್ ಟ್ರಂಪ್ – ಕೊಂಚ ಇಳಿದ ಚಿನ್ನದ ಬೆಲೆ
Comments are closed.