Bantwala: ಬಂಟ್ವಾಳ: ಸ್ಮಶಾನದಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳ ಕಳ್ಳತನ!!

Share the Article

Bantwala: ಬಂಟ್ವಾಳ (Bantwala) ಅಮ್ಮಾಡಿ ಪಂಚಾಯತ್ ಗೆ ಸೇರಿದ ರುದ್ರಭೂಮಿಯಿಂದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಆ. 11ರಂದು ಬೆಳಕಿಗೆ ಬಂದಿದೆ.

ಅಮ್ಮಾಡಿ ಗ್ರಾಮದ ದೇವಿನಗರದಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಹೆಣ ಸುಡುವ ಸಿಲಿಕಾನ್ ಚೇಂಬ‌ರ್, ಹಿತ್ತಾಳೆಯ ನೀರಿನ ನಲ್ಲಿ, ಕಬ್ಬಿಣದ ಏಣಿ,ಕಬ್ಬಿಣದ ಗೇಟ್ ಹಾಗೂ ಇನ್ನಿತರ ಸುಮಾರು 4 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಅಗಸ್ಟ್ 11ರಂದು ಸ್ಥಳೀಯ ನಿವಾಸಿ ಐತ್ತಪ್ಪ ಪೂಜಾರಿಯವರ ಮೃತದೇಹದ ದಹನ ಮಾಡಲು ರುದ್ರಭೂಮಿಗೆ ತೆರಳಿದಾಗ ಕಳವಾಗಿರುವುದು ತಿಳಿದು ಬಂದಿದೆ.

ಕಳ್ಳತನ ಪ್ರಕರಣದ ಕುರಿತು ಅಮ್ಮಾಡಿ ಗ್ರಾಮ ಪಂಚಾಯತ್ ನಿಂದ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಗ್ರಾ.ಪಂ.ಅಧ್ಯಕ್ಷ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

Dharmasthala Case: ಧರ್ಮಸ್ಥಳ ದೇಗುಲಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ – ಪ್ರಧಾನಿ ಮೋದಿಗೆ ಪತ್ರ ಬರೆದ ಕಿಯೋನಿಕ್ಸ್ ನೌಕರರ ಸಂಘದ ಅಧ್ಯಕ್ಷ

Comments are closed.