D K Shivkumar : ಸಚಿವ ರಾಜಣ್ಣ ವಜಾ ಮಾಡಿದ್ದು ನನಗೆ ತುಂಬಾ ನೋವಾಗ್ತಿದೆ – ಡಿ.ಕೆ. ಶಿವಕುಮಾರ್

D K Shivkumar : ರಾಹುಲ್ ಗಾಂಧಿ ದೇಶಾದ್ಯಂತ ನಡೆಸುತ್ತಿರುವ ಬಿಜೆಪಿ, ಚುನಾವಣಾ ಆಯೋಗದ ಮತ ಕಳ್ಳ ಅಭಿಯಾನದ ವಿರುದ್ಧವಾಗಿ ಮಾತನಾಡಿದ್ದ ಸಚಿವ ಕೆಎನ್ ರಾಜಣ್ಣ ಇದೀಗ ಸಚಿವ ಸಂಪುಟದಿಂದ ವಜಾ ಆಗಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜಣ್ಣ ವಜಾ ಕುರಿತು ಮಾತನಾಡಿದ್ದು, ಘಟನೆ ತುಂಬಾ ನೋವಾಗಿದೆ ಎಂದಿದ್ದಾರೆ.

ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ್ದು ನನಗೂ ತುಂಬಾ ನೋವನ್ನು ಉಂಟು ಮಾಡಿದೆ. ಆದರೆ ಅದು ಪಕ್ಷದ ನಿರ್ಧಾರ, ಏನು ಮಾಡಲಾಗದು. ಪಕ್ಷದ ನಿರ್ಧಾರಕ್ಕೆ ತಲೆಬಾಗಲೇಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅಲ್ಲದೆ ಸಚಿವರು, ಶಾಸಕರು, ಸಿಎಲ್ಪಿ ನಾಯಕರ ವ್ಯಾಪ್ತಿಗೆ ಬರುತ್ತಾರೆ. ನಮ್ಮ ವ್ಯಾಪ್ತಿಗೆ ಬರಲ್ಲ, ಅಶಿಸ್ತು ತೋರಿಸಿದರೆ ಸಣ್ಣಪುಟ್ಟ ನೋಟಿಸ್ ಕೊಡಬಹುದು. ಆದರೆ, ಕೆ.ಎನ್. ರಾಜಣ್ಣ ಅವರ ವಜಾಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಸಂಪುಟದಿಂದ ವಜಾಗೊಳಿಸಿರುವುದು ಪಕ್ಷದ ನಿರ್ಧಾರ. ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾಗೊಳಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಕೂಡ ಮುಖ್ಯಮಂತ್ರಿಯವರಿಗೆ ಕೇಳಿದೆ. ಅವರು ಮಾಹಿತಿ ತಿಳಿಸಿದರು. ಇಷ್ಟು ಮಾತ್ರ ನನಗೆ ಗೊತ್ತು ಎಂದು ಹೇಳಿದ್ದಾರೆ.
Viral Video : ಮುಸ್ಲಿಂ ಯುವತಿಯ ‘ಧರ್ಮಸ್ಥಳ ಪ್ರೇಮ’ – ವಿಡಿಯೋದಲ್ಲಿ ಆಕೆ ಹೇಳಿದ್ದೇನು?
Comments are closed.