ಚಾಮುಂಡೇಶ್ವರಿ ದೇವಿಯ ಅವಹೇಳನ ಮಾಡಿದ ಆಡಿಯೋ ವಿಡಿಯೋ ವೈರಲ್ | ತೊಕ್ಕೊಟ್ಟಿನ ನಿವಾಸಿ ಸ್ವಾಲಿಝ್ ಇಕ್ಬಾಲ್ ಬಂಧನ
ಉಳ್ಳಾಲ: ತೊಕ್ಕೊಟ್ಟು ನಿವಾಸಿ ಉದ್ಯಮಿಯೊಬ್ಬರು ಹಿಂದೂ ದೇವರುಗಳನ್ನು ನಿಂದಿಸಿದ್ದಕ್ಕಾಗಿ ಉಳ್ಳಾಲ ಪೊಲೀಸರು ಬಂಧಿಸಿದ ಘಟನೆ ಶನಿವಾರದಂದು ನಡೆದಿದೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಸ್ವಾಲಿಝ್ ಇಕ್ಬಾಲ್ (45) ಬಂಧಿತ ವ್ಯಕ್ತಿ ಎಂದು ತಿಳಿದುಬಂದಿದೆ.
ಸ್ವಾಲಿಝ್ ಇಕ್ಬಾಲ್ ಫರ್ನಿಚರ್ ಅಂಗಡಿ ಸಹಿತ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದು, ಚಾಮುಂಡೇಶ್ವರಿ ದೇವಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಮೂರು ದಿನಗಳಿಂದ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದಂತೆ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟಕರು ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ಇಂದು ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕರಾವಳಿಯಲ್ಲಿ ಹಿಂದೂ ದೇವರುಗಳ ನಿಂದನೆ ಹಾಗೂ ಹಿಂದೂಗಳ ದೈವಸ್ಥಾನಗಳ ಮಾಲಿನ್ಯ ಮಾಡುವ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಚ್ಚಾಗಿದ್ದು, ಹಿಂದೂಗಳ ಭಾವನೆಗಳಿಗೆ ನಿರಂತರವಾಗಿ ಧಕ್ಕೆ ಉಂಟಾಗುತ್ತಿರುವುದು ಬೇಸರದ ಸಂಗತಿ.