ಸಂಪುಟದಿಂದ ವಜಾಗೊಂಡ ಬಳಿಕ ಕೆಎನ್‌ ರಾಜಣ್ಣ ಫಸ್ಟ್‌ ರಿಯಾಕ್ಷನ್‌: ನನ್ನ ರಾಜೀನಾಮೆ ಹಿಂದೆ ಷಡ್ಯಂತ್ರ

Share the Article

KN Rajanna: ಸಚಿವ ಸಂಪುಟದಿಂದ ವಜಾಗೊಂಡ ನಂತರ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರ ಪಿತೂರಿ ಇದೆ. ಕಾಲ ಬಂದಗ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಮೇಲೆ ತಪ್ಪು ಗ್ರಹಿಕೆ ಆಗಿದೆ. ಈ ತಪ್ಪು ಗ್ರಹಿಕೆ ಸರಿಪಡಿಸುವ ಕಾರ್ಯ ನಾನು ಮಾಡಲಿದ್ದೇನೆ. ಕಾಂಗ್ರೆಸ್‌ ವರಿಷ್ಠರಿಗೆ ಮನವರಿಕೆ ಮಾಡಲು ದೆಹಲಿಗೆ ಹೋಗಲಿದ್ದೇನೆ ಎಂದು ರಾಜಣ್ಣ ಹೇಳಿದ್ದಾರೆ.

ಇದು ಹೈಕಮಾಂಡ್‌ ನಿರ್ಧಾರ. ಇದು ಪಕ್ಷದ ತೀರ್ಮಾನ ಎಂದು ರಾಜಣ್ಣ ಹೇಳಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ, ಷಡ್ಯಂತ್ರ ಇದೆ. ಈ ಪಿತೂರಿ ಹಾಗೂ ಷಡ್ಯಂತ್ರ ಹಿಂದೆ ಯಾರೆಲ್ಲ ಇದ್ದಾರೆ, ಏನೇನು ಆಗಿದೆ ಎಲ್ಲ ನನಗೆ ಗೊತ್ತಿದೆ ಎಂದು ರಾಜಣ್ಣ ಆಕ್ರೋಶದಿಂದ ಹೇಳಿದರು.

ರಾಹುಲ್‌ ಗಾಂಧಿ ಅವರಿಗೆ ತಪ್ಪು ಗ್ರಹಿಕೆಯಾಗಿದೆ. ಆ ತಪ್ಪು ಗ್ರಹಿಕೆಯನ್ನು ನಿವಾರಿಸುವ ಕುರಿತು ನಾನು ಪ್ರಯತ್ನ ಮಾಡುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ. ನಾವು ಎಲ್ಲಿ ಏನೇ ಮಾತನಾಡಿದ್ರೂ ನಾವು ಈ ಪಕ್ಷಕ್ಕೆ ಬದ್ಧವಾಗಿದ್ದೇವೆ ಎಂದು ರಾಜಣ್ಣ ಹೇಳಿದ್ದಾರೆ.

Comments are closed.