Home News Tripura Jawan: ಗಂಡು ಮಗು ಹುಟ್ಟಲಿಲ್ಲ ಎಂದು ಹೆಣ್ಣು ಮಗುವಿಗೆ ವಿಷ ಕೊಟ್ಟ ಸೇನಾ ಸಿಬ್ಬಂದಿ,...

Tripura Jawan: ಗಂಡು ಮಗು ಹುಟ್ಟಲಿಲ್ಲ ಎಂದು ಹೆಣ್ಣು ಮಗುವಿಗೆ ವಿಷ ಕೊಟ್ಟ ಸೇನಾ ಸಿಬ್ಬಂದಿ, ಮಗು ಸಾವು

Hindu neighbor gifts plot of land

Hindu neighbour gifts land to Muslim journalist

Tripura Jawan: ತ್ರಿಪುರ ರಾಜ್ಯ ರೈಫಲ್ಸ್‌ ಸಿಬ್ಬಂದಿ ತನ್ನ ಹೆಣ್ಣು ಮಗುವಿಗೆ ವಿಷ ಹಾಕಿ ಕೊಂದ ಘಟನೆ ನಡೆದಿದೆ. ಗಂಡು ಮಗು ಹುಟ್ಟದೇ ಹೆಣ್ಣು ಮಗು ಹುಟ್ಟಿತು ಎಂದು ಬೇಸರಗೊಂಡು ಈ ಕೃತ್ಯ ಎಸಗಿದ್ದು, ಈ ಘಟನೆ ತ್ರಿಪುರದ ಖೋವಾಯಿ ಜಿಲ್ಲೆಯಲ್ಲಿರುವ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.

ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಂತರ ಇನ್ನೊಂದು ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಆದರೆ ಮಗು ಅಷ್ಟರಲ್ಲಿ ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ವೈದ್ಯರು ಮೃತದೇಹವನ್ನು ಮೋರ್ಗ್ನಲ್ಲಿ ಇಟ್ಟಿದ್ದಾರೆ.

10ನೇ ಬೆಟಾಲಿಯನ್‌ ಟಿಎಸ್‌ಆರ್‌ ರಾಥೀಂದ್ರಾ ಡೆಬ್ಬರ್ಮಾನನ್ನು ಬಂಧನ ಮಾಡಲಾಗಿದೆ. ಮೂರು ದಿನಗಳ ಕಾಲ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

ತಾಯಿ ಮಿಥಾಲಿ ಡೆಬ್ಬರ್ಮಾ ತಮ್ಮ ಪತಿ ಮಗಳಿಗೆ ವಿಷವನ್ನು ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಗಂಡು ಮಗು ಬೇಕು ಎಂದು ಗಂಡ ಆಸೆ ವ್ಯಕ್ತಪಡಿಸಿದ್ದು, ಎರಡೂ ಹೆಣ್ಣು ಮಕ್ಕಳಾಗಿದ್ದಕ್ಕೆ ಬೇಸರಗೊಂಡು, ನನಗೆ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಹೋದರಿಯ ಮನೆಗೆ ಹೋಗಿದ್ದು, ಅಲ್ಲಿ ಮಗಳಿಗೆ ಬಿಸ್ಕೆಟ್‌ ಕೊಡಿಸಲು ಹತ್ತಿರದ ಅಂಗಡಿಯೊಂದಕ್ಕೆ ಪತಿ ಕರೆದುಕೊಂಡು ಹೋಗಿದ್ದು, ಮನೆಗೆ ಬಂದಾಗ ಮಗಳು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದ್ದಳು. ಬಾಯಲ್ಲಿ ಔಷಧಿ ವಾಸನೆ ಬರುತ್ತಿತ್ತು. ಈ ಕುರಿತು ಪತಿಯಲ್ಲಿ ಕೇಳಿದಾಗ ಸತ್ಯ ಗೊತ್ತಾಯಿಯ, ಆಗ ಪತಿ ನನ್ನ ಮೇಲೆ ಹಲ್ಲೆ ಮಾಡಿದ ಎಂದು ಹೆಂಡತಿ ತಿಳಿಸಿದ್ದಾರೆ.

KN Rajanna Resignationa: ರಾಹುಲ್‌ ಗಾಂಧಿ ಖಡಕ್‌ ಆದೇಶದ ಬೆನ್ನಲ್ಲೇ ರಾಜಣ್ಣ ರಾಜೀನಾಮೆ: ಕಾರಣವೇನು?