KN Rajanna Resignationa: ರಾಹುಲ್‌ ಗಾಂಧಿ ಖಡಕ್‌ ಆದೇಶದ ಬೆನ್ನಲ್ಲೇ ರಾಜಣ್ಣ ರಾಜೀನಾಮೆ: ಕಾರಣವೇನು?

Share the Article

Rahul Gandhi Instructions: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಸೂಚನೆಯ ಬೆನ್ನಲ್ಲೇ ಕೆಎನ್‌ ರಾಜಣ್ಣ ಸಹಕಾರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದರು.

ರಾಹುಲ್‌ ಗಾಂಧಿ ಮತಗಳ್ಳತನ ಕುರಿತು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ.8 ರಂದು ಆರೋಪ ಮಾಡಿದ್ದರು. ನಂತರ ರಾಜಣ್ಣ ನಾವು ಮೊದಲು ಮತಪಟ್ಟಿ ನೋಡಿಕೊಳ್ಳದೇ ಈಗ ಹೇಳುತ್ತಿರುವುದಕ್ಕೆ ನಮಗೆ ನಾಚಿಕೆಯಾಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಸಿದ್ಧವಾಗಿತ್ತು. ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ಪ್ರಶ್ನಿಸುವ ಮೂಲಕ ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆಯನ್ನು ನೀಡಿದ್ದರು.

ಈ ವಿಡಿಯೋವನ್ನು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕರ್ನಾಟಕ ಉಸ್ತುವಾರ ಸುರ್ಜೇವಾಲಾ ಕಳುಹಿಸಿದ್ದರು. ಇದನ್ನು ವೇಣುಗೋಪಾಲ್‌ ಅವರು ರಾಹುಲ್‌ ಗಾಂಧಿ ಗಮನಕ್ಕೆ ತಂದಿದ್ದಾರೆ. ಇದನ್ನು ನೋಡಿದ ಕೂಡಲೇ ರಾಹುಲ್‌ ಗಾಂಧಿ ಕೂಡಲೇ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರ ಹೋರಾಟವನ್ನು ಅವಮಾನಿಸುವಂತೆ ರಾಜಣ್ಣ ಮಾತನಾಡಿದ್ದಾರೆ. ರಾಹುಲ್‌ ಆದೇಶದಂತೆ ರಾಜಣ್ಣ ಪುತ್ರ ರಾಜೇಂದ್ರ ರಾಜೀನಾಮೆ ಪತ್ರವನ್ನು ಸಿಎಂ ಸಲ್ಲಿಸಿದ್ದರು. ರಾಹುಲ್‌ ಖಡಕ್‌ ಸೂಚನೆಯ ಹಿನ್ನೆಲೆಯಲ್ಲಿ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

Dharmasthala Case: ಧರ್ಮಸ್ಥಳ ಕೇಸ್‌ ಕುರಿತು ತನಿಖೆ ಮುಗಿಯುವವರೆಗೂ ಮಾತನಾಡಲ್ಲ: ಜಿ.ಪರಮೇಶ್ವರ್‌

Comments are closed.