KN Rajanna: ರಾಜಣ್ಣ ರಾಜೀನಾಮೆ: ಸುದ್ದಿಗಾರರ ಪ್ರಶ್ನೆಗೆ ಎರಡು ಕೈ ಮುಗಿದು ಒಳ ಹೋದ ಡಿಕೆಶಿ

KN Rajanna: ಸಹಕಾರ ಸಚಿವ ಕೆಎನ್ ರಾಜಣ್ಣ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಎರಡು ಕೈ ಮುಗಿದು ಒಳ ಹೋದ ಘಟನೆ ನಡೆದಿದೆ.

ವಿಧಾನಸೌಧದಲ್ಲಿ ಮಾಧ್ಯಮಗಳು ರಾಜಣ್ಣ ರಾಜೀನಾಮೆ ಕುರಿತು ಪ್ರಶ್ನೆ ಕೇಳಿದಾಗ, ಡಿಸಿಎಂ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದದ್ದು, ಮತ್ತೆ ಪ್ರಶ್ನೆ ಕೇಳಿದಾಗ ಡಿಕೆಶಿ ಎರಡು ಕೈ ಮುಗಿದು ಸಿಎಂ ಸಿದ್ದರಾಮಯ್ಯ ಅವರ ಕೊಠಡಿಗೆ ತೆರಳಿದರು.
ರಾಜಣ್ಣ ಅವರ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಅವರು ತಮ್ಮ ತಂದೆಯ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದಾರೆ. ಸಿಎಂ ಆಪ್ತರಾಗಿರುವ ರಾಜಣ್ಣ ಅವರ ರಾಜೀನಾಮೆಯನ್ನು ಸಿದ್ದರಾಮಯ್ಯ ಅವರು ಹೈಕಮಾಂಡ್ನಿಂದ ಸ್ಪಷ್ಟವಾದ ಸಂದೇಶ ಬಂದ ಹಿನ್ನೆಲೆಯಲ್ಲಿ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ.
Comments are closed.