Dharmasthala case: ಧರ್ಮಸ್ಥಳ ಪ್ರಕರಣ – ಇದು ಮತಾಂತರಿಗಳ ಕೈವಾಡ – ದೂರುದಾರನಿಗೆ ಮಂಪರು ಪರೀಕ್ಷೆ ಮಾಡಿಸಿ – ಸಿ ಟಿ ರವಿ ಆಗ್ರಹ

Share the Article

Dharmasthala case: ಪರಿಷತ್ ಸದಸ್ಯ ಸಿ.ಟಿ.ರವಿ ಧರ್ಮಸ್ಥಳ ಪ್ರಕರಣ ಸಂಬಂಧ ಸಿಎಂಗೆ ನಾನು ಕೆಲ ಪ್ರಶ್ನೆ ಕೇಳ್ತೇನೆ ಎಂದು ಕಲಾಪದಲ್ಲಿ ಹೇಳಿ ಅನೇಕ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದಾರೆ. ಧರ್ಮಸ್ಥಳದ ದೂರುದಾರನ ಹಿನ್ನೆಲೆ ಏನು?ಅದನ್ನ ನೀವು‌ ಪರಿಶೀಲನೆ‌ ಮಾಡಿದ್ದೀರಾ? ದೂರಿನ ಮೇಲೆ ಎಸ್ ಐಟಿ ಮಾಡಿದ್ದೀರಾ? ಇಲ್ಲ ದೂರುದಾರನ ಒತ್ತಡದ ಮೇಲೆ ಮಾಡಿದ್ದೀರಾ? ಎಂದು ‌ಪ್ರಶ್ನಿಸಿದರು.

ಸಚಿವ ದಿನೇಶ್ ಗುಂಡೂರಾವ್, ಎಡಪಂತೀಯ ಸಂಘಟನೆ ಒತ್ತಡಕ್ಕೆ ಎಸ್ ಐಟಿ ಮಾಡಿದ್ದೇವೆ ಅಂದಿದ್ದಾರೆ. ದೂರುದಾರನ ಮಂಪರು ಪರೀಕ್ಷೆಗೆ ಯಾಕೆ‌ ಒಳ ಪಡಿಸಿಲ್ಲ? 16 ಸ್ಥಳಗಳಲ್ಲಿ‌ ಮಣ್ಣು ಬಿಟ್ಟು ಬೇರೆ ಸಿಕ್ಕಿಲ್ಲ. ಆದರೂ ಅವನ‌ ಹಿಂದೆ ಹೋಗ್ತಿರೋದು ಯಾಕೆ?ಸತ್ಯಾಸತ್ಯತೆ ಹೊರತರುವುದಕ್ಕಾ? ಇಲ್ಲಾ‌ಧರ್ಮಸ್ಥಳದ ಚಾರಿತ್ರ್ಯ ಹಾಳು ಮಾಡೋದಕ್ಕಾ? ಎಂದು ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆ ಗೈದರು.

17 ಜಾಗಗಳನ್ನ ದೂರು ದಾರ ತೋರಿಸಿದ. ಒಂದರಲ್ಲಿ ಮಾತ್ರ ಕೆಲ ಕುರುಹು ಸಿಕ್ಕಿದೆ. ಉಳಿದ 16 ರಲ್ಲಿ ಏನೂ ಸಿಕ್ಕಿಲ್ಲ. ಕೆಲ ಯೂಟ್ಯೂಬರ್ಸ್ ತಪ್ಪು ಸುದ್ದಿ ಹಾಕ್ತಿದ್ದಾರೆ. ಯೂಟ್ಯೂಬರ್ ಮೇಲೆ ಯಾಕೆ‌ ಕ್ರಮವಿಲ್ಲ? ಕೆಲ ಮಾಧ್ಯಮಗಳು ತಪ್ಪು ಸುದ್ದಿ ಹಾಕ್ತಿದ್ದಾರೆ, ಯಾಕೆ ಅವರ ಮೇಲೆ ಕ್ರಮ‌ಕೈಗೊಂಡಿಲ್ಲ ಎಂದು ಸಿಎಂ ಅನ್ನು ‌ಕೇಳಿದ್ದಾರೆ.

ಜಾತಿ ಮತಗಳಿಗೆ ಭೇದವಿಲ್ಲ ಅಂತ‌ ಧರ್ಮಸ್ಥಳ ತೋರಿಸಿದೆ. ಸಹಪಂಕ್ತಿ ಭೋಜನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಅವಕಾಶ ಕೊಟ್ಟಿದ್ದಾರೆ. ಯಾಕೆ ನೀವು ಈ ವಿಷಯದಲ್ಲಿ ಮೌನ‌ವಹಿಸಿರೋದು?ಅನ್ಯಮತೀಯರು ಇದೇ ರೀತಿ ಮಾಡಿದ್ರೆ ಹೇಗೆ? ಇದೊಂದು ದೊಡ್ಡ ಷಡ್ಯಂತ್ರ ಇದ್ದಂತಿದೆ. ಮತಾಂತರ ಮೂಲಕ ಬೆಳೆ ಬೆಳೆಯೋಕೆ‌ ಅವರಿಗೆ ಆಗ್ತಿಲ್ಲ. ಮತಾಂತರಿಗಳ ಕೈವಾಡವೂ ಇದೆ ಎಂದು ಹೇಳಿದರು.

ಕೆಲ ಖಾಸಗಿ ವಿದ್ಯಾಸಂಸ್ಥೆಗಳು ಇದರ ಹಿಂದಿವೆ. ನಗರ ನಕ್ಸಲರು ಇದರ ಹಿಂದಿರಬಹುದು. ಕಾಡಿನ ನಕ್ಸಲರಿಗೆ ನೀವು ನಗರಕ್ಕೆ ಬಿಟ್ಟುಕೊಂಡ್ರಿ. ಇವರೆಲ್ಲರೂ ಇದಕ್ಕೆ ಕಾರಣರಾಗ್ತಿದ್ದಾರೆ. ಎಸ್ ಐಟಿಯನ್ನ ವಿಸ್ತರಣೆ ಮಾಡಬೇಕು. ಇದೊಂದು ವ್ಯಾಪಕ ಸಂಚು ಅನ್ನೋದು ಇದೆ.ಇದರ ಬಗ್ಗೆಯೂ ತನಿಖೆ ನಡೆಸಬೇಕು. ಮತೀಯ ಶಕ್ತಿಗಳ‌ ಜೊತೆ ನೀವು ಇದ್ದೀರ ಅನ್ನೋ‌ ನಂಬಿಕೆ ಬರಲಿದೆ. ನಿಮ್ಮ ತನಿಖೆ ಪಾರದರ್ಶಕವಾಗಿರಲಿ. ಮಧ್ಯಂತರ ತನಿಖೆಯನ್ನ ಬಿಡುಗಡೆ ಮಾಡಬೇಕು. ದೂರುದಾರನನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಸಿಎಂಗೆ ಬಿಜೆಪಿ ನಾಯಕ ಸಿ.ಟಿ.ರವಿ ಆಗ್ರಹಪಡಿಸಿದರು.Kerala: ಸಾಂಬಾರ್ ಮಾಡಲು ಮನೆಗೆ ತಂದ ಮೀನು – ಹೊಟ್ಟೆಯಲ್ಲಿತ್ತು 2 ಅಡಿ ಉದ್ದದ ನಾಗರಹಾವು

Comments are closed.