Kerala: ಸಾಂಬಾರ್ ಮಾಡಲು ಮನೆಗೆ ತಂದ ಮೀನು – ಹೊಟ್ಟೆಯಲ್ಲಿತ್ತು 2 ಅಡಿ ಉದ್ದದ ನಾಗರಹಾವು

Kerala: ಸಾಂಬಾರ್ ಮಾಡಲು ತಂದ ಮೀನಿನ ಹೊಟ್ಟೆಯಲ್ಲಿ ಎರಡು ಅಡಿ ಉದ್ದದ ನಾಗರಹಾವು ಪತ್ತೆಯಾದಂತಹ ಅಚ್ಚರಿ ಘಟನೆ ಒಂದು ನಡೆದಿದೆ.

ಹೌದು, ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕೆರೆಯಲ್ಲಿ ಹಿಡಿದ ಮೀನಿನ ಹೊಟ್ಟೆಯಲ್ಲಿ ನಾಗರಹಾವು ಪತ್ತೆಯಾಗಿದೆ.
ಚಾರುಮ್ಮೂಡ್ ನಿವಾಸಿ ಸನೋಜ್ ಅವರು ಶನಿವಾರ ಸಂಜೆ ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ ತಮ್ಮ ಮನೆಯ ಪಕ್ಕದ ಜಮೀನಿನ ಬಳಿಯ ಕೊಳದಲ್ಲಿ ನೀನು ಹಿಡಿಯಲು ಹೋಗಿದ್ದರು. ಈ ವೇಳೆ 900 ಗ್ರಾಂ ತೂಕದ ವರಲ್ ಮೀನನ್ನು ಹಿಡಿದರು. ಸಂಜೆ ಅಡುಗೆ ಮಾಡಲು ಸಿದ್ಧರಾಗುತ್ತಿದ್ದ ಸನೋಜ್ ಅವರ ಪತ್ನಿ ಮೀನನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ ಹೊಟ್ಟೆಯಲ್ಲಿ ಹಾವಿನ ಚರ್ಮದಂತಹದ್ದನ್ನು ಕಂಡಿದ್ದಾರೆ. ಅದು ಏನೆಂದು ನೋಡಲು ಅವಳು ಹೊಟ್ಟೆಯನ್ನು ತೆರೆದಾಗ. ಒಳಗೆ ಎರಡು ಅಡಿ ಉದ್ದದ ನಾಗರಹಾವು ಕಂಡುಬಂದಿತು.
ಗ್ರಾಮದಲ್ಲಿ ಈ ವಿಚಾರ ಭಾರಿ ಚರ್ಚೆಯಾಯಿತು. ಸನೋಜ್… ಮೀನಿನ ಜೊತೆಗೆ ನೆಲದಲ್ಲಿ ಒಂದು ಗುಂಡಿಯನ್ನು ಅಗೆದು ಹಾವನ್ನು ಹೂಳಿದರು. ಮೀನಿನ ಹೊಟ್ಟೆಯಲ್ಲಿ ನಾಗರಹಾವು ಕಂಡು ಅವರು ಆಶ್ಚರ್ಯಚಕಿತರಾದರು. ಕೆಲವು ಮೀನುಗಾರರು ಮುರ್ರೆ ಮೀನುಗಳು ಸಣ್ಣ ಹಾವುಗಳನ್ನು ತಿನ್ನುತ್ತವೆ ಎಂದು ಹೇಳಿದರು… ಆದರೆ ಈ ಗಾತ್ರದ ನಾಗರಹಾವು ನಾಗರಹಾವನ್ನು ತಿನ್ನುವುದನ್ನು ಅವರು ನೋಡಿದ್ದು ಇದೇ ಮೊದಲಂತೆ.
Supreme Court: ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು !!
Comments are closed.